ಇದು ಕಾಲೇಜು ದಿನಗಳಲ್ಲಿ ಎನ್.ಸಿ.ಸಿ. ವತಿಯಿಂದ ಪರ್ವತಾರೋಹಣ ಶಿಬಿರಕ್ಕೆ ಹೋದಾಗಿನ ಸುಂದರ ನೆನಪು. ಯಾಕಂದ್ರೆ ಒಬ್ಬ ಪರ್ವತಾರೋಹಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ ಎನ್ನುವುದನ್ನು ಚಲನಚಿತ್ರ ವೀಕ್ಷಿಸಿ ತಿಳಿದುಕೊಳ್ಳಬಹುದು. ಅದರ ಪ್ರಾಯೋಗಿಕ ಅನುಭವವನ್ನು ಈ ಶಿಬಿರಗಳು ನೀಡುತ್ತದೆ. 2011ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಮನಾಲಿಯಲ್ಲಿರುವ ಅಟಲ್ ಬಿಹಾರಿ ಪರ್ವತಾರೋಹಣ ತರಬೇತಿ ಕೇಂದ್ರದಲ್ಲಿ Advance mountaineering camp ಮುಗಿಸಿದೆ. ಆ ವೇಳೆಯಲ್ಲಿ, ಪರ್ವತಾರೋಹಣ ಮಾಡುವಾಗ ಯಾರಿಗಾದರೂ ಪೆಟ್ಟಾಗಿದ್ದಲ್ಲಿ ಅವರನ್ನು ಹೇಗೆ ಸಾಗಿಸುತ್ತಾರೆ ಎನ್ನುವ ಕುರಿತಂತೆ ಮಾಡಿದ practical ಇದು.
ಅದಕ್ಕೂ ಮೊದಲು ನನಗೆ ಸ್ವಲ್ಪ ಜ್ವರ ಬಂದಿತ್ತು. ಹೀಗಾಗಿ ಒಂದು ದಿನ ರೆಸ್ಟ್ ಮಾಡಿ, ಔಷಧಿಗಳನ್ನೆಲ್ಲ ತೆಗೆದುಕೊಂಡಿದ್ದೆ. ಆದರೂ ಅಲ್ಲಿರುವ ಗ್ರೇಡಿಂಗ್ ವ್ಯವಸ್ಥೆ’ ಹಾಗೂ ಅದೇನೋ ಒಂಥರ ಸೆಳೆತ ನಮ್ಮನ್ನು ಹಲವು ಹೊಸ ಪರೀಕ್ಷೆಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ. ಅದರ ಒಂದು ಪುಟ್ಟ ತುಣುಕು ಇಲ್ಲಿದೆ.
ಇದನ್ನ ನಾನೇನೋ ಸಾಧನೆ ಮಾಡಿದೆ ಅಂತ ಹೇಳಿಕೊಳ್ಳಲು ತೋರಿಸುತ್ತಿಲ್ಲ. ಬದಲಿಗೆ ಒಬ್ಬ ಪರ್ವತಾರೋಹಿ ಅದ್ಯಾವುದೇ ಸ್ಥಿತಿಯಲ್ಲಿದ್ದರೂ ಜೊತೆಗಿರುವವರ ಜೀವ ಉಳಿಸಬೇಕು ಎಂದಾದಲ್ಲಿ ಇಂಥ ಹಲವು ಸಾಹಸಗಳನ್ನು ಮಾಡಲೇಬೇಕಾಗುತ್ತದೆ. ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ ಅಷ್ಟೆ. ನಾನು ಆ ವೇಳೆ ಸುಮಾರು 55 ಕೆಜಿಯಷ್ಟು ತೂಕವಿದ್ದೆ. ನನ್ನ ಬೆನ್ನ ಮೇಲಿರುವ ರಾಜಸ್ಥಾನದ ಜಗದೀಶ್ (45 ಕೆಜಿ ತೂಕವಿದ್ದ)ನನ್ನು ಹೊತ್ತುಕೊಂಡು ಹೆಚ್ಚು ಕಡಿಮೆ 150 ಅಡಿಗಳಷ್ಟು ಮೇಲಿನಿಂದ ಕೆಳಗೆ ಇಳಿದಿದ್ದೇನೆ.
ನೋಡಿ ಆನಂದಿಸಿ...
========================================================================
#college, atalbiharivajpayeeinstituteofmountaineeringandalliedsports, #memories, #travel, #abvimas, #mountaineering, #manali, #ncc, #NoPainNoGain #Video #Achivemen #Exams, #Atal #Manali, #Himalaya, #Mountains, #Class, #Institution, #Sports, #Adventure,
0 Comments