Introduction
ನಾನು ಅಪ್ಪಟ ಮಲೆನಾಡಿನ ಹುಡುಗ.. ಹುಟ್ಟಿದ್ದು ಒಂದೂರಿನಲ್ಲಿ.. ಬೆಳೆದಿದ್ದು ಮತ್ತೊಂದೂರಿನಲ್ಲಿ... ಹೀಗಾಗಿ ಯಾವುದು ನನ್ನದು.. ಯಾವುದು ನನ್ನದಲ್ಲ ಅನ್ನೋ ಗೊಂದಲದ ನಡುವೆಯೂ ಎಲ್ಲವನ್ನೂ ನನ್ನದಾಗಿಸಿಕೊಂಡಿದ್ದೇನೆ. ಹೀಗಾಗಿ ಹುಟ್ಟೂರು ಹಾಗೂ ಬೆಳೆಸಿದೂರು ಎರಡೂ ಸ್ವಂತದ್ದಾಗಿದೆ. ಆದರೂ ಅವೆರಡಕ್ಕೂ ನಾನು ಅಪರಿಚಿತ. ಇದರ ಮಧ್ಯೆಯೂ ಮತ್ತೊಂದೂರಿನಲ್ಲಿ ಬಾಳ ನೌಕೆ ಸಾಗಿಸುತ್ತಿದ್ದೇನೆ. ಇವುಗಳ ನಡುವೆ ಹಲವೆಡೆ ಸಂಚರಿಸಿದ್ದರೂ ನನ್ನದು ಎಂಬುದು ಯಾವುದು ಎನ್ನುವ ಪ್ರಶ್ನೆ ಮಾತ್ರ ಕಾಡುತ್ತಿದೆ...? ಹೀಗಾಗಿ ಜಗದುದ್ದಕ್ಕೂ ಸ್ನೇಹಿತರ ದಂಡಿದೆ. ಹಲವು ವರ್ಷ ಸೋಲಾರ್ ಕಂಪನಿಗಳಲ್ಲಿ ಕೆಲಸ ಮಾಡಿ ಸಾಕಷ್ಟು ಸುತ್ತಾಡಿ, ಬಳಿಕ ಮತ್ತೆ ಹೊತ್ತಿಗೆ ಹಿಡಿದು ಕಾಲೇಜಿಗೆ ಕಾಲಿಟ್ಟವ ನಾನು. ಪತ್ರಿಕೋದ್ಯಮದ ಜೊತೆಯಲ್ಲಿ ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್ ಓದಿ ಅರ್ಥವಾಗದಿದ್ದರೂ ಅಥೈಸಿಕೊಂಡು ಡಿಗ್ರಿ ಸರ್ಟಿಫಿಕೇಟ್ ಪಡೆದು ಮಾಧ್ಯಮ ಲೋಕದಲ್ಲಿ ಕಾಲಿಟ್ಟಿದ್ದೇನೆ. ಕಳೆದ ಮೂರು ವರ್ಷಗಳ ಈ ತಿರುಗಾಟದಲ್ಲಿ ಹಲವು ಸಂಸ್ಥೆಗಳ ಮೆಟ್ಟಿಲು ಹತ್ತಿ ಇಳಿದಿದ್ದೇನೆ. ಮಾಧ್ಯಮದ 24*7 ವಾಹಿನಿಗಳು, ವೆಬ್ ಪೋರ್ಟಲ್ ಹಾಗೂ ಪಾಕ್ಷಿಕ ಹೀಗೆ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇದರ ಜೊತೆಯಲ್ಲಿ ಒಂದಷ್ಟು ತಿರುಗಾಟ, ಪರ್ವತಾರೋಹಣ ಮೊದಲಾದ ಹವ್ಯಾಸಗಳನ್ನಿಟ್ಟುಕೊಂಡಿದ್ದೇನೆ. ಪುಟ್ಟ ಲೈಬ್ರರಿ, ಜೊತೆಗಷ್ಟು ಫೋಟೋಗ್ರಫಿ, ಓದು, ಬರೆವಣಿಗೆ, ಹೀಗೆ ಸಾಗಿದೆ ಸಮುದ್ರದೆಡೆಗಿನ ಜೀವನವೆಂಬ ಮಹಾನದಿಯ ಪಯಣ..
Interests
ನನ್ನ ಹಾಗೆ ನನ್ನ ಆಸಕ್ತಿಗಳೂ ವಿಚಿತ್ರ.. ಓದೋದು.. ಈಜು, ಓಟ, ತಿರುಗಾಟ, ಪರ್ವತಾರೋಹಣ, ಹಳೆಯ ಹಿಂದಿ ಹಾಡು ಕೇಳೋದು.. ಹೀಗೆ ಸಾಗಿದೆ ಇವುಗಳ ಪಟ್ಟಿ.. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..
0 Comments