ಗುಳಿಕೆನ್ನೆಗೆ ಕೆಂದೂಳ ಚಿತ್ತಾರವಿಟ್ಟ ಗಳಿಗೆಗೆಲ್ಲಿಯ ಮರೆವು...
ಕಳೆದು ಹೋಗಿಯಾಗಿದೆ.... ಮತ್ತೆ ಹುಡುಕಲೇಬೇಕೆಂಬ ಹಪಹಪಿಯೂ ಹುಟ್ಟುತ್ತಿಲ್ಲ. ಅದೇಕೋ ಬೇಸರದ ಭಾವ ನೀಗಿಸಲು ಮತ್ತೊಮ್ಮೆ ಎದೆಯಾಳದಿಂದ ಮೂಡಣದ ನೇಸರನಂತೆ ಉದಯಿಸಿರುವೆ ನೀನು.... ನಮ್ಮಿಬ್ಬರ ಕಳೆದಳಿದುಳಿದ ಭೂತಕಾಲದ ಬಗ್ಗೆ ಇತ್ತೀಚೆಗೆ ಆಲೋಚನೆಯೊಂದು ನನ್ನೆದೆಯಲ್ಲಿ ಸುಳಿದಾಡುತ್ತಿದೆ. ಬದುಕ ನೀಡುವ ಉಸಿರನ್ನೇ ಕೆಲ ಕಾಲ ಹಿಡಿದಿಟ್ಟುಕೊಳ್ಳಲಾಗದು. ದೇಹದ ಕಣಕಣವು ಕ್ಷಣಕೊಂದರಂತೆ ಹುಟ್ಟಿ ಸಾಯುತ್ತದೆ. ಅಂಥದ್ದರಲ್ಲಿ ಕೇವಲ ಒಂದಷ್ಟು ವರ್ಷದ ನಮ್ಮಿಬ್ಬರ ಸಂಬಂಧವ್ಯಾವ ಲೆಕ್ಕ?? ಸುಖಾ ಸುಮ್ಮನೆ ನೀನು ಹಾಗೆ... ನಾನು ಹೀಗೆ.... ಎಂಬ ವ್ಯರ್ಥಾಲಾಪಕ್ಕಿಂತ ಆಗಿರುವುದು, ಆಗುತ್ತಿರುವುದು ಮತ್ತು ಆಗಲಿರುವುದೆಲ್ಲವೂ ಒಳ್ಳೆಯದಕ್ಕೇ ಎನ್ನುವ ದಾರ್ಶನಿಕರಂತೆ ಬದುಕು ಕಟ್ಟಿಕೊಳ್ಳಬೇಕು. ಅದರಿಂದ ನಮ್ಮಿಬ್ಬರ ಆ ಘಟನಾವಳಿಗಳಿಗೆ ವೈಶಿಷ್ಟ್ಯತೆಗಳೊಂದಷ್ಟು ಹುಟ್ಟಿಕೊಳ್ಳುತ್ತದೆ. ಕೇವಲ ಉತ್ಕೃಷ ಪ್ರೀತಿ, ಗಾಢ ಸಂಬಂಧ, ತಂಗಾಳಿಯಂತೆ ಹರಿದಾಡುತ್ತಿದ್ದ ನಗು, ಆಗೊಮ್ಮೆ ಈಗೊಮ್ಮೆ ದುರುದ್ದೇಶವಿಲ್ಲದೆ ಎದ್ದೆದ್ದು ಬರುತ್ತಿದ್ದ ತಿಳಿಸಂಜೆಯಂಥ ಹುಸಿಕೋಪ, ಭವದ ಭಾರ ಕಳೆವಂತೆ ಹೆಗಲಿಗಾತುಕೊಂಡು ನೀಲ್ಗಡಲ ದಡದಲ್ಲಿ ಹಾಕಿದ ಹೆಜ್ಜೆಗ್ಯಾವ ಲೆಕ್ಕ.... ಕಳೆಯುವುದೆಲ್ಲವೂ ಕೂಡಿಡಲಿಕ್ಕೆನೋ ಎಂಬ ಭಾ...
0 Comments