ಅದೇಕೋ ಗೊತ್ತಿಲ್ಲ. ಏನೇ ಆದರೂ ಎಲ್ಲವನ್ನೂ ನುಂಗಿಕೊಂಡಿರುತ್ತಿದ್ದವನಿಗೆ ಈಗ ಅದೆಲ್ಲವನ್ನೂ ಹೊರಗೆಡವುವ ಆಸೆ. ಆದರೆ ಯಾರ ಬಳಿ ಹೇಳಿಕೊಳ್ಳಲಿ..? ಹೇಗೆ ವಿವರಿಸಲಿ..? ಅವರ ಕಣ್ನೋಟಗಳಿಗೆ ಏನೆಂದು ಉತ್ತರಿಸಲಿ..? ಇಂಥ ಸಾವಿರ ಪ್ರಶ್ನೆಗಳ ಮಧ್ಯೆ ಕೂಡಿ, ಕಳೆದು, ಗುಣಿಸಿ, ಭಾಗಿಸುತ್ತಾ ಸಮಯ ಹಾಳು ಮಾಡುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಮತ್ತೆ ನೆನಪಾದದ್ದು ನೀನು.
ಅದೆಲ್ಲವಕ್ಕೂ ನೀನೇ ಸರಿಯಾದ ವ್ಯಕ್ತಿ. ಆಸರೆ ಕೂಡ.
ನಿನ್ನ ಎದುರು ಮನದೊಳಗಿನ ಜಂಜಡಗಳನ್ನು ವಿವರಿಸಿ ಹಗುರಾಗಲೇಬೇಕಾದ ಅನಿವಾರ್ಯತೆ ನನಗೆ. ನಿನಗೆ ಅವೆಲ್ಲವೂ ಅರ್ಥವಾಗುತ್ತಾ ಗೊತ್ತಿಲ್ಲ. ಆದರೂ ಅವೆಲ್ಲವನ್ನೂ ನಿನ್ನೊಂದಿಗೆ ಯಾಕೆ ಹೇಳುತ್ತಿದ್ದೇನೆ ಅಂತ ಮಾತ್ರ ಕೇಳಬೇಡ. ಅದನ್ನು ಕೇಳಿದರೂ ಯಾವತ್ತಿಗೂ ಉತ್ತರಿಸಲಾರೆ. ಆದರೆ ನನ್ನೆದೆಯ ಭಾವದ ಭಾರ ಇಳಿಸುವ ಹೊಣೆ ಮಾತ್ರ ನಿನ್ನದು.. ಅದು ನಿನ್ನೊಬ್ಬಳಿಗೇ ಸೇರಿದ್ದು..
ನಾನು ನಾನಾಗಿರಬೇಕು ಅಂತಾದರೆ ನನ್ನೊಳಗಿನ ಮತ್ತೊಂದು ಮುಖವನ್ನು ನಿಂಗೆ ತೋರಿಸಲೇಬೇಕು. ಅದರ ಅರ್ಥ ನಾನು ಕೆಟ್ಟವನು ಅಂತಲ್ಲ. ನನಗೂ ಉಳಿದವರಂತೆ ಮನಸ್ಸಿದೆ. ಅದರೊಳಗೆ ಒಂದಷ್ಟು ಭಾವನೆಗಳಿವೆ. ಸಿಟ್ಟು, ಕೋಪ, ತಾಪ, ದುಃಖ, ನಗು, ಬೇಸರ ಹೀಗೆ ಮೊದಲಾದವೆಲ್ಲವೂ ಬಂದು ಹೋಗುತ್ತಿರುತ್ತವೆ. ಅವೆಲ್ಲವನ್ನೂ ಹೇಳಿಕೊಳ್ಳಲು ನನಗೆ ನಿನ್ನೊಬ್ಬಳ ಹೊರತು ಮತ್ಯಾರೂ ಇಲ್ಲ.! ನಿನ್ನ ಹೆಗಲೇ ನನಗಾಸರೆ.
ನೀನು ಈಗ ನನ್ನ ಜೊತೆಗಿಲ್ಲ ಅನ್ನೋ ವಾಸ್ತವದ ಅರಿವೂ ನನಗಿದೆ. ಅದೆಲ್ಲದರ ಹೊರತಾಗಿಯೂ ನಾನೇನೇ ಹೇಳಿ ಹಂಚಿಕೊಂಡರು ಅದು ನಿನ್ನೊಂದಿಗೆ ಮಾತ್ರ ಎಂಬುದು ನಿನಗೂ ಗೊತ್ತಿರದ ಸಂಗತಿಯೇನಲ್ಲ..!
ಅಂದು ನೀನು ನನ್ನ ಜೊತೆಗಿದ್ದಾಗ ಇಷ್ಟವೋ ಕಷ್ಟವೋ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೆ. ನನ್ನಿಂದ ದೂರಾದ ಬಳಿಕವೂ ನನ್ನೆಡೆಗಿನ ಭಾವ ಬದಲಾಗಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ನನಗೆ. ಆದ್ದರಿಂದಲೇ ಈಗಲೂ ಅದನ್ನೇ ಮಾಡುತ್ತೀಯಾ ಅನ್ನೋ ಅಭಿಮಾನ ನನ್ನದು.
ಈಗ ಕಾಲ ಬದಲಾಗಿದೆ.. ದಿನಗಳು ಉರುಳಿವೆ.. ಮಹಾನದಿಯಲ್ಲೂ ಸಾಕಷ್ಟು ನೀರು ಹರಿದು ಹೋಗಿದೆ.. ನೀನೂ ಸಮಯದೊಂದಿಗೆ ಸುಧಾರಣೆ ಕಂಡಿದ್ದೀಯ. ಆದರೂ ನಾನು ಮಾತ್ರ ಅಂದು ನೀನು ಬಿಟ್ಟುಹೋದಾಗ ಹೇಗಿದ್ದೇನೋ ಈಗಲೂ ಹಾಗೇ ಉಳಿದಿದ್ದೇನೆ. ಅದೂ ಮತ್ತೊಂದು ಹೆಗಲಿನಾಸರೆಗಾಗಿ ಕಾದು..!!
====================================================================
#ಅರ್ಥ, #ಸಮುದ್ರ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಅನಿವಾರ್ಯತೆ, #ಭಾರ, #ಉತ್ತರ, #ನೀರು, #ಆದಿ, #ಅಂತ್ಯ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಹಾಳು #ElevatedFOOT, #Life, #Love, #Colour, #Feelings, #FeelthePain, #River, #Water, #Samudra,
Chennagide
ReplyDeleteThis comment has been removed by the author.
ReplyDeleteSuperrrrrr anna thumba channaguden......Mansina mathugallu Bavagla mulaka Akshradali chithurthavagide once again superrrrrr......
ReplyDeleteNovvunda mansige bavgala thoranna
ಎಲ್ಲಾ ಸಾಲುಗಳು ತುಂಬಾ ಚೆನ್ನಗಿದೇ ಮತ್ತು ಮನಸಿಗೆ ಹತ್ತಿರವಾಗಿವೇ... ಬರವಣಿಗೆ ಹೀಗೇ ಮುಂದುವರೇಯಲಿ ಗೆಳಯ.....
ReplyDeleteThanks @Vinay
Deleteಚಂದ ಬರದ್ದೆ ಭಾವಾ..
ReplyDeleteಮುಂದುವರೆಸು
ಆ ಹೆಗಲು ಸಿಗಲಿ.....
ReplyDeleteಒಳ್ಳೆಯ ಬರವಣಿಗೆ
ಆ ಹೆಗಲು ಸಿಗಲಿ.....
ReplyDeleteಒಳ್ಳೆಯ ಬರವಣಿಗೆ