ಕಳೆದು ಹೋಗಿಯಾಗಿದೆ.... 

    ಮತ್ತೆ ಹುಡುಕಲೇಬೇಕೆಂಬ ಹಪಹಪಿಯೂ ಹುಟ್ಟುತ್ತಿಲ್ಲ. 
    ಅದೇಕೋ ಬೇಸರದ ಭಾವ ನೀಗಿಸಲು ಮತ್ತೊಮ್ಮೆ ಎದೆಯಾಳದಿಂದ ಮೂಡಣದ ನೇಸರನಂತೆ ಉದಯಿಸಿರುವೆ ನೀನು.... 

    ನಮ್ಮಿಬ್ಬರ ಕಳೆದಳಿದುಳಿದ ಭೂತಕಾಲದ ಬಗ್ಗೆ ಇತ್ತೀಚೆಗೆ ಆಲೋಚನೆಯೊಂದು ನನ್ನೆದೆಯಲ್ಲಿ ಸುಳಿದಾಡುತ್ತಿದೆ. ಬದುಕ ನೀಡುವ ಉಸಿರನ್ನೇ ಕೆಲ ಕಾಲ ಹಿಡಿದಿಟ್ಟುಕೊಳ್ಳಲಾಗದು. ದೇಹದ ಕಣಕಣವು ಕ್ಷಣಕೊಂದರಂತೆ ಹುಟ್ಟಿ ಸಾಯುತ್ತದೆ. ಅಂಥದ್ದರಲ್ಲಿ ಕೇವಲ ಒಂದಷ್ಟು ವರ್ಷದ ನಮ್ಮಿಬ್ಬರ ಸಂಬಂಧವ್ಯಾವ ಲೆಕ್ಕ??  


    ಸುಖಾ ಸುಮ್ಮನೆ ನೀನು ಹಾಗೆ... ನಾನು ಹೀಗೆ.... ಎಂಬ ವ್ಯರ್ಥಾಲಾಪಕ್ಕಿಂತ ಆಗಿರುವುದು, ಆಗುತ್ತಿರುವುದು ಮತ್ತು ಆಗಲಿರುವುದೆಲ್ಲವೂ ಒಳ್ಳೆಯದಕ್ಕೇ ಎನ್ನುವ ದಾರ್ಶನಿಕರಂತೆ ಬದುಕು ಕಟ್ಟಿಕೊಳ್ಳಬೇಕು. ಅದರಿಂದ ನಮ್ಮಿಬ್ಬರ ಆ ಘಟನಾವಳಿಗಳಿಗೆ ವೈಶಿಷ್ಟ್ಯತೆಗಳೊಂದಷ್ಟು ಹುಟ್ಟಿಕೊಳ್ಳುತ್ತದೆ. 

    ಕೇವಲ ಉತ್ಕೃಷ ಪ್ರೀತಿ, ಗಾಢ ಸಂಬಂಧ, ತಂಗಾಳಿಯಂತೆ ಹರಿದಾಡುತ್ತಿದ್ದ ನಗು, ಆಗೊಮ್ಮೆ ಈಗೊಮ್ಮೆ ದುರುದ್ದೇಶವಿಲ್ಲದೆ ಎದ್ದೆದ್ದು ಬರುತ್ತಿದ್ದ ತಿಳಿಸಂಜೆಯಂಥ ಹುಸಿಕೋಪ, ಭವದ ಭಾರ ಕಳೆವಂತೆ ಹೆಗಲಿಗಾತುಕೊಂಡು ನೀಲ್ಗಡಲ ದಡದಲ್ಲಿ ಹಾಕಿದ ಹೆಜ್ಜೆಗ್ಯಾವ ಲೆಕ್ಕ.... ಕಳೆಯುವುದೆಲ್ಲವೂ ಕೂಡಿಡಲಿಕ್ಕೆನೋ ಎಂಬ ಭಾವದೊಂದಿಗೆ ಹುಡುಕುತ್ತಿದ್ದ ಊರುಗಳೆಲ್ಲಿಯವೋ!!! ಕಷ್ಟವಾದರೂ ಇಷ್ಟಪಟ್ಟು ಬಗಲಲ್ಲಿ ಹೊತ್ತು ತರಿಸಿ ಅಂದವಾಗಿಸಿಟ್ಟ ಆ ಮಾಳಿಗೆಯು ಬೆನ್ನು ಹರವಿದಾಗಲೆಲ್ಲ ತೊಟ್ಟಿಲು ತೂಗುತ್ತಿತ್ತು... ಪರದೇಸಿಯಂತೆ ಓಡಾಡಿ ಖುಷಿಯಿಂದ ಎದೆಗವುಚಿಕೊಂಡು ತಂದ ಪ್ರೀತಿಗೊಂದು ಅಮೂರ್ತತೆ ಕೊಟ್ಟ ರಾಧಾಕೃಷ್ಣರ ಮೂರ್ತಿ... ಕಣ್ಣು ಬಿಡುವುದೇ ಕೂತುಹಲ ತಣಿಸಲೇನೋ ಎಂಬಂತಿರುವ ನಿನ್ನ ಹಸುಗೂಸ ಹುರುಪು,.. ಅಂಗಾಲಲ್ಲಿ ಹಸೆ ಹರವಿ ಗುಳಿ ಕೆನ್ನೆಗೆ ಕೆಂದೂಳ ಚಿತ್ತಾರವಿಟ್ಟ ಗಳಿಗೆಗೆಲ್ಲಿಯ ಮರೆವು... 
    ಹೀಗೆ ಒಂದಾ.... ಎರಡಾ.... 

    ಜೀವನವೇನಿದ್ದರೂ ಸಿಂಪಲ್ಲಾಗಿ ಕೇವಲ ಕೂಡಿಡುವ ಸಂತೆ, ಆದರೆ ಯಾವುದನ್ನೂ ಹಿಡಿದಿಟ್ಟು ಕೊಳ್ಳುವಂತಿಲ್ಲ ಇಲ್ಲಿ!!!! 

    ಬದುಕಲ್ಲಿ ಬುದ್ಧನ ಭಾವಾರ್ಥ ಬಂದ ಬಳಿಕ....... 

=========================================================================
#ಸಮುದ್ರ, #ಸಮ್ಮುಖಂ, #ಬದುಕು, #ಬುದ್ಧ #ಭಾವಾರ್ಥ, #ಚಿತ್ತಾರ, #ಭಾವ  #ಅಂದ  #ರಾಧಾಕೃಷ್ಣ #ಮೂರ್ತಿ, #ಗುಳಿ #ಕೆನ್ನೆ #ಅಮೂರ್ತತೆ  #ಹಸುಗೂಸು, #ಹುರುಪು,  #ಅಂಗಾಲು #ಹಸೆ, #ದಡ #ಹೆಜ್ಜೆ #ಲೆಕ್ಕ #ಎದೆಯಾಳ #ಮೂಡಣ #ನೇಸರ #ಉದಯ #ನೀನು, #ಉತ್ಕೃಷಪ್ರೀತಿ, #ಪ್ರೀತಿ, #ಸಂಬಂಧ, #ತಂಗಾಳಿ #ನಗು, #ತಿಳಿಸಂಜೆ #ಹುಸಿಕೋಪ, #ಭವ #ಭಾರ #Love #Affection #Samudra #Life #Evening #Sun #God #Buddha #Feeling #Relationship #Morning #Sunset #Krishn #Feet #ElevatedFOOT #Run #Lough #chittara 


Tags: #Love #Life #LoveandLife #Features #Stories

Post a Comment

0 Comments

Skip to main content