ಇಬ್ಬರಿಗೂ ಉಳಿದಿಲ್ಲ ಅರಿಯುವ ಬಿಡುವು...

 ಅದೆಷ್ಟು ಬೇಗ ದೂರಾದೆವು...

ಕರೆದಾಗ ಸಿಗುತ್ತಿದ್ದವನೀಗ ಕರೆಗೂ ನಿಲುಕದಷ್ಟು ದೂರಾದೆಯಾ...
ಹಂಚಿಕೊಂಡ ಭಾವನೆಗಳೆಲ್ಲ ವಿರಾಮವನಿಡುವಷ್ಟು ಮರೆಯಾದವಾ...
ಕಣ್ಣಿರಿಟ್ಟಾಗ ಜತೆಗಿದ್ದ ಹೆಗಲೀಗ ಹೇಳದಷ್ಟು ಹಳತಾಯಿತಾ...
ನಕ್ಕಾಗ ಆನಂದದ ಹೊನಲು ಹರಿಸಿದ್ದ ಮೊಗವೀಗ ಮೇಣದಂತೆ ಕರಗಿ ಹೋಯಿತಾ...
ಹರಹಿಕೊಂಡ ಸಾಗರದಗಲದ ಕನಸುಗಳಿಗೆಲ್ಲ ಕಾರ್ಮೋಡ ಕವಿಯಿತಾ?




ತಪ್ಪು ನನ್ನದಾ ನಿನ್ನದಾ ತಿಳಿಯದು...
ಇಬ್ಬರದೂ ಅಲ್ಲದ ಸಮ್ಮತಿಗೆ ದೇವರೊಬ್ಬನೇ ಸಾಕ್ಷಿ...
ನನ್ನ ತಳಮಳಗಳನ್ನೆಲ್ಲ ಹಂಚಿಕೊಳ್ಳೋಣ ಎಂದರೆ ನಿನ್ನ ಮನದಾಳದ ದುಗುಡಗಳು ಅರಿವಾಗುತ್ತಿದೆ...
ಎದೆಗೂಡ ನೋವಿನರ್ಥ ಆಗುವುದು ನಿನಗೆ ಹಂಚಿಕೊಂಡರೆ ಮಾತ್ರ...!
ಇಲ್ಲದೇ ಹೋದರೆ ನೀ ಜತೆಗಿದ್ದೂ ಈ ಜಗದಿ ನಾ ಒಬ್ಬಂಟಿ... 


ಕಾರಣಗಳೇನೇ ಆಗಿದ್ದರೂ ಅರಿಯಲು ಸದ್ಯ ನಮ್ಮಿಬ್ಬರಿಗೂ ಬಿಡುವು... 
 
        =====================================================================================
#Features,#Poems, #Love #Life #ತಪ್ಪು, #ಜಗ, #ಸಮ್ಮತಿ, #ಬಿಡುವು, #ಮನ, #ಎದೆ, #ತಳಮಳ, #Poet #Kannada #Lines #ದೂರ, #ಕರೆ, #ನಿಲುಕು, #ಹಂಚಿಕೊಳ್ಳು, #ಭಾವನೆ, #ವಿರಾಮ, #ಮರೆವು, #ಕಣ್ಣಿರು, #ಹೆಗಲು, #ಹಳತು, #ನಗು, #ಆನಂದ, #ಹೊನಲು, #ಹರಿವು, #ಮೊಗ, #ಮೇಣ, #ಕರಗಿ, #ಹೋಗು, #ಹರವು, #ಸಾಗರ, #ಅಗಲ, #ಕನಸು, #ಕಾರ್ಮೋಡ, #ಕವಿ, #ಭಾವನೆ, #ಪ್ರೀತಿ, #ಸಮುದ್ರ, #Samudra, #Writting #ಭಾಷೆ, #ಬೆರಗು, #ಒಂಟಿತನ
Tags: #Features#Love #Life#Poems

ಶ್ರೀಪಾದ ಸಮುದ್ರ

😊🇮🇳Human being.. 💪Fitness Trainer 🧘Wellness Coach 🏃Runner 🏔️🧗Mountaineer 📖 Bookworm 🎯Pro-Sumer

Post a Comment

0 Comments

Skip to main content