ಮರದಿಂದ ಹಣ್ಣೊಂದೇ ಅಲ್ಲ  

ವಿದ್ಯುತ್ ಕೂಡಾ ಉತ್ಪಾದನೆಯಾಗುತ್ತೆ..! 


ಮರವನ್ನು ಕೇವಲ ಮನೆ ಕಟ್ಟಲು, ಪೀಠೋಪಕರಣ ತಯಾರಿಸಲು, ಅಡುಗೆ ಮಾಡಲು, ಅಲಂಕಾರಿಕವಾಗಿ ಬಳಸುತ್ತಿದ್ದ ಮನುಷ್ಯ ಈಗ ಅದನ್ನು ಮತ್ತೊಂದು ರೀತಿಯಲ್ಲಿ ಉಪಯೋಗಿಸಲು ಮುಂದಾಗಿದ್ದಾನೆ. ಇದರಿಂದ ಮರಗಳ ಕಡಿಯುವ ಪ್ರಕ್ರಿಯೆ ಕಡಿಮೆಯಾಗಿ ಉಳಿಸಿ, ಬೆಳೆಸಿ ಶಕ್ತಿಯ ಮತ್ತೊಂದು ರೂಪವಾದ ವಿದ್ಯುತ್ ಅನ್ನೂ ಪಡೆಯಲು ಗಮನ ಹರಿಸಬಹುದಾಗಿದೆ.

   ಹೀಗಾಗಿ ಇಷ್ಟು ದಿನ ಬರಿ ನೀರು, ಗಾಳಿ, ಸೂರ್ಯನ ಬೆಳಕು, ಕಲ್ಲಿದ್ದಲು, ಅಣು ಶಕ್ತಿ ಇತ್ಯಾದಿಗಳಿಂದ ಮಾತ್ರ ವಿದ್ಯುತ್ ಉತ್ಪಾದಿಸಬಹುದು ಎಂದು ಕೊಡಿದ್ದೆವು. ಆದರೆ ಈಗ ಟೆಕ್ನಾಲಜಿ ಬದಲಾಗಿದೆ. ಕಳೆದ ಕೆಲ ವರ್ಷಗಳಿಂದ ಕೇಳಿಬರುತ್ತಿರುವ ಬದಲಿ ಇಂಧನ ವ್ಯವಸ್ಥೆಗೆ ಈಗ ವಿಜ್ಞಾನಿಗಳು ಮತ್ತೊಂದು ಆವಿಷ್ಕಾರವನ್ನು ಮಾಡಿದ್ದಾರೆ. ಅದೇಮರದಿಂದ ವಿದ್ಯುತ್ ಉತ್ಪಾದನೆ. ಇದರಲ್ಲಿ ಬಳಸಿರುವ 3 ಡಿ ಪ್ರಿಂಟರ್ಗಳ ಮೂಲಕ ಮೊಬೈಲ್ ಚಾರ್ಜಿಂಗ್ ಮೊದಲಾದ ಮನೆ ಬಳಕೆಯ ಕರೆಂಟ್ ಉತ್ಪಾದನೆ ಮಾಡಬಹುದೆನ್ನುವುದನ್ನು ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

ಹಸಿರು ತಂತ್ರಜ್ಞಾನದ ಬಳಕೆ
ಈಗ ಕೇವಲ ಕಾಡು ಕಡಿದು ವಿದ್ಯುತ್ ಉತ್ಪಾದಿಸುವ ಬದಲಾಗಿ ಪುಟ್ಟ ಪುಟ್ಟ ಮರಗಳನ್ನು ಮನೆಯೊಳಗೇ ಬೆಳೆಸಿ ಕರೆಂಟ್ ತಯಾರಿಸಬಹುದಾಗಿದೆ. ಫಿನ್ಲ್ಯಾಂಡ್ ವಿಜ್ಞಾನಿಗಳು ಹಸಿರು ತಂತ್ರಜ್ಞಾನವನ್ನು (‘Green’ technology) ಬಳಸಿಕೊಂಡು ಸೋಲಾರ್ ಸೆಲ್ಗಳಿರುವ ಎಲೆಗಳನ್ನು ತಯಾರಿಸಿ ವಿದ್ಯುತ್ ಉತ್ಪಾದಿಸಬಹುದೆನ್ನುವ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ. ಎಲೆಗಳನ್ನು 3 ಡಿ ಪ್ರಿಂಟರ್ಗಳ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ

   ಫಿನ್ಲ್ಯಾಂಡ್ ವಿಟಿಟಿ ಟೆಕ್ನಾಲಜಿ ರಿಸರ್ಚ್ ಸೆಂಟರ್ ವಿಜ್ಞಾನಿಗಳು ಯಾವುದೇ ರೀತಿಯಲ್ಲೂ ಪರಿಸರಕ್ಕೆ ಮಾರಕವಾಗದಿರುವ ಹಾಗೆ ಸೋಲಾರ್ ಮರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವುಗಳು ತಾಂತ್ರಿಕವಾಗಿ ಸಾಕಷ್ಟು ಸುಧಾರಣೆಗಳನ್ನು ಹೊಂದಿದ್ದು, ಎಲ್ಲೆಯಿಲ್ಲದಷ್ಟು ಮರು ರೂಪಾಂತರಗೊಂಡಿವೆ. ಮುಂದಿನ ದಿನಗಳಲ್ಲಿ ಸೋಲಾರ್ ಮರಗಳನ್ನು ಅಭಿವೃದ್ಧಿ ಪಡಿಸಿ ಶಕ್ತಿಯ ಪ್ರಮುಖ ಮೂಲವಾಗಿ ಬಳಸಿಕೊಳ್ಳಲು ಚಿಂತನೆ ನಡೆಯುತ್ತಿದೆ.

ಸೋಲಾರ್ ಮರ ಹೇಗೆ ಕೆಲಸ ನಿರ್ವಹಿಸುತ್ತದೆ..?
ವಿನೂತನ ಸೋಲಾರ್ ಮರ ಹೇಗೆ ಕೆಲಸ ಮಾಡುತ್ತದೆ ಅಂತ ಯೋಚನೆ ನಿಮಗೆ ಬಂದಿರಬೇಕು ಅಲ್ವಾ..? ಮರವು ತಾಂತ್ರಿಕ ನಾವಿನ್ಯತೆಯನ್ನು ಹೊಂದಿದೆ. ಇದರ ಎಲೆಗಳನ್ನು ಮಾಸ್ ಪ್ರೊಡಕ್ಷನ್ ಟೆಕ್ನಿಕ್ಗಳಿಂದ ಉತ್ಪಾದಿಸಲಾಗಿದ್ದು, ಪ್ರತಿಯೊಂದು ಎಲೆಯೂ ಎಲೆಕ್ಟ್ರಿಸಿಟಿ ಕನ್ವರ್ಟರ್ಗಳನ್ನು ಹೊಂದಿದೆ. ಅಲ್ಲದೆ ಮರದಲ್ಲಿರುವ ಮೂರ್ನಾಲ್ಕು ಎಲೆಗಳು ಸೂರ್ಯನ ಬೆಳಕನ್ನು ಹೀರಿಕೊಂಡು, ಶಾಖದಿಂದಲೂ ವಿದ್ಯುತ್ ಉತ್ಪಾದಿಸುತ್ತವೆ. ಇಷ್ಟಾದರೆ ಅದು ಸಾಮಾನ್ಯವಾದ ಸೋಲಾರ್ ಪೆನಲ್ನಂತಾಗುತ್ತದೆ. ಆದರೆ ಇದರ ಜೊತೆಯಲ್ಲಿ ಇವುಗಳ ಮತ್ತೊಂದು ವಿಶೇಷತೆ ಎಂದರೆ ಗಾಳಿಯ ಅದುರುವಿಕೆಯಿಂದಲೂ ಎಲೆಗಳು ಕರೆಂಟ್ ತಯಾರಿಸುತ್ತವೆ.

   ಇವುಗಳ ಜೊತೆಯಲ್ಲಿ ಮುಖ್ಯವಾಗಿ ಮರದ ಕಾಂಡವನ್ನು ‘3ಡಿ ಪ್ರಿಂಟೆಡ್ ಟೆಕ್ನಿಕ್’ನಿಂದ ಜೈವಿಕ ಸಂಯುಕ್ತಗಳನ್ನು ಬಳಸಿ ತಯಾರಿಸಲಾಗಿದೆ. ಮರದ ಕಾಂಡ ಹಾಗೂ ಕೊಂಬೆಗಳನ್ನು ಜೈವಿಕ ಉಪ ಉತ್ಪನ್ನಗಳಿದ ಹುಟ್ಟಿದ ತಂತುಗಳನ್ನು ಬಳಸಿಕೊಂಡು ನಿರ್ಮಾಣಮಾಡಲಾಗಿದೆ. ಮರದ ಎಲೆಗಳು ಉತ್ಪಾದಿಸಿದ ವಿದ್ಯುತ್ತನ್ನು ಮರದ ಬುಡದಲ್ಲಿರುವ ಬ್ಯಾಟರಿಯಲ್ಲಿ ಶೇಖರಿಸಿ ಇಡಬಹುದಾಗಿದೆ. ಇಡೀ ಮರವನ್ನು ಪರಿಸರಕ್ಕೆ ಮಾರಕವಾಗದ ರೀತಿಯ ಹಸಿರು ತಂತ್ರಜ್ಞಾನ ಬಳಸಿ ಉತ್ಪಾದಿಸಲಾಗಿದೆ.

   ಹೀಗೆ ಶೇಖರಣೆಯಾದ ವಿದ್ಯುತ್ನಿಂದ ಮೊಬೈಲ್ ಫೋನ್ನಂತಹ ನಿತ್ಯದ ಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಇವುಗಳನ್ನು ಕಿಟಕಿಯ ಬಳಿಯಲ್ಲೋ ಅಥವಾ ವರಾಂಡದಲ್ಲೋ ಇಟ್ಟು ವಿದ್ಯುತ್ ಉತ್ಪಾದಿಸಿಕೊಳ್ಳಬಹುದಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ರಾತ್ರಿ ವೇಳೆಯಲ್ಲಿ ಬೀಸುವ ಗಾಳಿಯಿಂದಲೂ ಒಂದಷ್ಟು ಕರೆಂಟ್ ಜನರೇಟ್ ಆಗುತ್ತಿರುತ್ತದೆ


ಆಕರ್ಷಕವಾಗಿ ಕಾಣುವ ಸೋಲಾರ್ ಟ್ರೀ..
ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಮರವನ್ನು ತಯಾರಿಸಲಾಗಿದ್ದು, ಮನೆಯೊಳಗಣ ಅಲಂಕಾರ ವೃದ್ಧಿಗೂ ಇದನ್ನು ಬಳಸಬಹುದಾಗಿದೆ. ಇದರ ಕಾಂಡ, ಎಲೆಗಳು ನೋಡಲು ಸುಂದರವಾಗಿದ್ದು, ಇತರರನ್ನೂ ಆಕರ್ಷಿಸುವ ಹಾಗೆ ತಯಾರಿಸಲಾಗಿದೆ. ಇದರ ಮತ್ತೊಂದು ಉಪಯೋಗ ಎಂದರೆ ಈಸಿ ಟು ಕ್ಲೀನ್ ಎಂಡ್ ಈಸಿ ಟು ಹ್ಯಾಂಡಲ್. ಅಂದರೆ ಉಳಿದ ದೊಡ್ಡ ದೊಡ್ಡ ಸೋಲಾರ್ ಪ್ಲೇಟ್ಗಳನ್ನು ತೊಳೆದು, ಒರೆಸಿ ಕ್ಲೀನಿಂಗ್ ಮಾಡಿದಷ್ಟು ಕಷ್ಟಪಡಬೇಕಿಲ್ಲ. ಬದಲಿಗೆ ಮನೆಯ ಒಳಗೆ ಇಟ್ಟುಕೊಳ್ಳುವುದರಿಂದ ಧೂಳು ಕುಳಿತಿದ್ದಾಗ ಒರೆಸಬಹುದು ಮತ್ತು ಇದನ್ನು ಬೇಕೆಂದಲ್ಲಿಗೆ ತೆಗೆದುಕೊಂಡು ಹೋಗಿ ಇಟ್ಟು ಬಳಸಬಹುದಾಗಿದೆ.

   ಹೀಗಾಗಿ ಸೋಲಾರ್ ಮರವು ಮುಂದಿನ ದಿನಗಳಲ್ಲಿ ಬದಲಿ ವಿದ್ಯುತ್ ಪ್ರಮುಖ ಸಾಧನವಾಗಿ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.


   ಆದರೆ ಸೋಲಾರ್ ಮರದಿಂದ ಕೇವಲ ಸಣ್ಣ ಪುಟ್ಟ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾತ್ರ ಚಾರ್ಜ್ ಮಾಡಬಹುದು ಎಂದು ನೀವು ಚಿಂತಿಸಬಹುದು. ಅದೇ ನಾಳೆ ಸಂಪೂರ್ಣ ಕಾಡು ನಾಶವಾದ ಮೇಲೆ.. ಭವಿಷ್ಯದ ಬಗ್ಗೆ ಯೋಚಿಸಲೇ ಬೇಕಾದ ಪ್ರಶ್ನೆ ನಮ್ಮ ಮುಂದಿದೆ.  


Published in 'Life 360' magazine 


================================================================================
#features, #stories, #tree, #solar, #electricity, #power, #technology, #adoptation #Kannada, #Magazine, #Life360 #innovation #concept 
Tags: #Features#stories

Post a Comment

0 Comments

Skip to main content