ಕಳೆದುಕೊಳ್ಳಲೆಂದೇ ಬಂದಿದೆ ಮತ್ತೊಂದು ಜನುಮದಿನ

ಏನೆಂದು ಹೇಳಲಿ ?
ನಾನೊಂದು ಬಗೆದರೆ ದೈವವೊಂದು ಬಗೆಯುತ್ತಂತೆ . ಹಾಗಾಗಿದೆ ನನ್ನ ಪರಿಸ್ತಿತಿ.
ಕಾಲ ಚಕ್ರ ತಿರುಗುತ್ತಿರಬಹುದು. ಆದರೆ ಈ ತಿರುಗಾಟದಲ್ಲಿ ಮತ್ತೆ ಮತ್ತೆ ಅದೇ ಕ್ಷಣಕ್ಕೆ ಏಕೆ ಬಂದು ನಿಲ್ಲುತ್ತದೆ ಚಕ್ರದ ಮುಳ್ಳುಗಳು. ಚಲಿಸುವಾಗ ಮನಸ್ಸಿನ ತುಂಬೆಲ್ಲ ಗುರುತುಗಳನ್ನು ಮೂಡಿಸುತ್ತಾ  ಇರುತ್ತದೆ. ತಿರುಗುವ ಚಕ್ರಕ್ಕೂ ಗೊತ್ತಿದೆ ಏನೋ  ಈ ಗುರುತುಗಳು ಎಂದಿಗೂ ಅಳಿಸಲಾರವೆಂದು. ಎಂದೋ ಆಗಿಹೊದ ಘಟನೆಗಳನ್ನು ಮತ್ತೊಮ್ಮೆ ಮತ್ತೊಮ್ಮೆ ನೆನಪಿಸಲು ಬಂದು ನಿಲ್ಲುತ್ತವೆ...
ಇದು ಸಮುದ್ರದ ದಂಡೆಯಲ್ಲಿನ ನಿನ್ನ ಸೌಮ್ಯವಾದ ಹೆಜ್ಜೆಗುರುತುಗಳಲ್ಲ. ಅಪರುಪಕ್ಕೆಂಬಂತೆ ಬರುವ ಹಳೆ ಮಳೆಗೆ ಚಿಗುರುವ ಗುಲಾಬಿ ಗಿಡ. ಬದುಕಿಸಿದಾತನನ್ನು ಮತ್ತೊಮ್ಮೆ ಹಂಬಲಿಸಿ ಮಾತನಾಡಿಸುವ ಕಾತುರ. ಅಲ್ಲಿ ಯಾವುದೇ ಕಾಮನೆಗಳಿಲ್ಲ. ಕೇವಲ ಮನಸ್ಸಿನಲ್ಲಾಗುತ್ತಿರುವ ಭಾವನೆಗಳ ಕಾಮನಬಿಲ್ಲನ್ನು ತೋರಿಸುವ ಹಂಬಲ. ಆದರೆ ಈ ಭೂಮಿಯಲ್ಲಿ ನಿನ್ನ ಪ್ರೀತಿಯ ಜೀವ ಜಲವನ್ನು ಎರೆಯುವುದೆಂದೋ...? ಅದಕ್ಕಾಗಿ ಕಾತರಿಸಿ ಕುಳಿತಿದೆ ನನ್ನ ಪುಟ್ಟ ಹೃದಯವೆಂಬ ಗುಲಾಬಿ ಗಿಡ.

   ಕಳೆದ ವರುಷ ಇದೇ ದಿನ ನನಗೆ ಕೊನೆಯ ಪರೀಕ್ಷೆ. ಅಂದೇ ನಿನ್ನ ಜನುಮ ದಿನ. ಅದಕ್ಕೊಂದು ಪುಟ್ಟ ಶುಭಾಶಯವನ್ನು ತಂಗಿಯ ಮೂಲಕ ತಿಳಿಸಿ (ನಿನ್ನ ಸೌಮ್ಯವಾದ ಮುಖದಲ್ಲಿದ್ದುದು ನಿಷ್ಕಲ್ಮಶ ನಗು ಮಾತ್ರವೆನೋ...? ನನ್ನೆಲ್ಲ ರೀತಿ ನೀತಿಗಳಿಗೆ.) ನಾನು ಹೋಗಿ ಕುಳಿತದ್ದು ಪರೀಕ್ಷಾ ಕೊಠಡಿಯಲ್ಲಿ, ಕಾಲೇಜಿನಲ್ಲಿ ಕೊಡುವ ಅಂಕಗಳಿಗಾಗಿ. ಹೊರಗೆ ನೀನು ಹೊರಟು ನಿಂತದ್ದು ನಿನ್ನದು ಎಂಬ ಸ್ವಂತ ಊರಿಗೆ, ಇಲ್ಲಿನವರೆಲ್ಲರನ್ನೂ ಬಿಟ್ಟು. ಹೋಗುವಾಗ ನೀನಾದರೋ ಏನೂ ಮಾತನಾಡದೆ ನನಗೊಂದು gift ತಲುಪಿಸಿ ಹೋದೆ. ಏನೆಂದು ತಿಳಿಯಲಿ ಇದರರ್ಥವನ್ನು...? 

  ಅದನ್ನು ಪಡೆಯುವಾಗ ನನ್ನೊಳಗೆ ಉಂಟಾಗುತ್ತಿದ್ದ ತುಮುಲಗಳನ್ನು ನೆನಪಿಸಿಕೊಂಡರೆ ಕಣ್ಣಾಲಿಗಳು ತುಂಬಿ ಬರುತ್ತವೆ ಇಂದಿಗೂ, ಅವೆಲ್ಲವನ್ನೂ ವಿವರಿಸುವುದಾದರೂ ಯಾರಿಗೆ...? ನೀನೆ ಹೇಳು.

   ಮತ್ತೊಂದು ಜನುಮದಿನ ಬಂದು ನಿಂತಿದೆ ನಿನ್ನೆದುರಿಗೆ. ಅಲ್ಲಿಗೆ ಇನ್ನೊಂದು ವರುಷ ಜೀವನದಲ್ಲಿ ಕಳೆದು ಹೋಯಿತು. ಅಂದರೆ ಜೊತೆಗೊಂದು ವರುಷ ದೊಡ್ದವಳಾದೆ  ಬದುಕಿನಲ್ಲಿ. 

   ಎಲ್ಲ ರೀತಿಯಿಂದಲೂ...! ಪೂರ್ತಿಯಾಗಿ 365ದಿನಗಳೂ ಸೂರ್ಯ ಜಗತ್ತನ್ನು ಬೆಳಗಿಸಿ ಮರೆಯಾದ. ಅದು ಅವನ ನಿತ್ಯದ ಕಾಯಕ. ಮುಂದಿನ 365 ದಿನಗಳೂ ಬಂದು ಹೋಗುತ್ತಾನೆ. ಆದರೆ ನೀನು......
ಈಗ ಅದೇ ದಿನ ನನಗೆ ಕಟ್ಟಕಡೆಯ ಪರೀಕ್ಷೆ (ಜೀವನದ್ದಲ್ಲ...!). ಅಲ್ಲಿಗೆ ಕಾಲೇಜು ದಿನಗಳು ಮುಕ್ತಾಯವಾಗುತ್ತದೆ.

   ಪರಿಸ್ತಿತಿ ಹೀಗಿದೆ. ಹೇಗೆ ಓದುವುದು? ಏನೆಂದು ಬರೆಯುವುದು...! ತಿಳಿಯುತ್ತಿಲ್ಲ. ಹಳೆಯದೆಲ್ಲವನ್ನೂ ಮತ್ತೆ ಮತ್ತೆ ಕೆದಕಿ ಕೆದಕಿ ಉಂಟಾದ ಗಾಯದಂತೆ ಮಾಡುತ್ತಿದೆ ಕಾಲ ಚಕ್ರ..... 

   ಆದರೆ ಈ ವರ್ಷ ಹೇಗೆ ಹೇಳಲಿ ನಿನಗೆ 'ಆ ದಿನದ' ಉಡುಗೊರೆಯನ್ನು...? (ಹಿಂದಿನ ಸಾರ್ತಿ ನಿನಗೊಂದು ಆಶ್ಚರ್ಯವಾದರೂ ಆಗಿತ್ತೇನೋ? ಇಂದು...) ನಿನಗೋಸ್ಕರ ನಿಮ್ಮೂರ ಜಾತ್ರೆಯಲ್ಲಿ ಕೊಂದು ತಂದ ಆ ಪುಟಾಣಿ ......!!!
ಅದನ್ನು ಹೇಗೆ ತಲುಪಿಸಲಿ ಹೇಳು ಗೆಳತಿ...? 

======================================================================== 
#ಗೆಳತಿ, #ಕಾಲೇಜು #ದಿನ, #ಕಾಲಚಕ್ರ #ಜಾತ್ರೆ #ಸೂರ್ಯ #ನಿತ್ಯ #ಕಾಯಕ. #love, #college, #features, #loveandlife, #life, #ಸಮುದ್ರ, #ನೀರು, #ಆದಿ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಅನಿವಾರ್ಯತೆ, #ಭಾರ, #ಉತ್ತರ, #ಹಾಳು #ಯುಗಾದಿ #ಮಾಘ #ಹೃದಯ #ಸಮಾಧಾನ 
Tags: #Love #Life #LoveandLife #Features #Stories

ಶ್ರೀಪಾದ ಸಮುದ್ರ

😊🇮🇳Human being.. 💪Fitness Trainer 🧘Wellness Coach 🏃Runner 🏔️🧗Mountaineer 📖 Bookworm 🎯Pro-Sumer

Post a Comment

0 Comments

Skip to main content