ನಿನ್ನ ನಿರಾಕರಣೆಗೊಂದು ಅರ್ಥವಿದೆಯೇನೋ..? ಆದರೆ ಅದನ್ನೆಂದಿಗೂ ನೀನು ನನಗೆ ಹೇಳಲಾರೆ. ಯಾಕೆಂದರೆ ಅದು ನಿನಗೂ ಅನಿವಾರ್ಯವೇನೊ..? ನನ್ನ ಸಾಂಗತ್ಯ ಬೇಕೆಂದು ನೀನು ಭಾವನೆಗಳನ್ನು ವ್ಯಕ್ತಪಡಿಸುವ ರೀತಿ.. ಹೇಳುವ ವಿಧಾನ... ಅಕ್ಷರಗಳು ಸೂಚಿಸುವ ಅನರ್ಥಗಳು... ಎಲ್ಲಕ್ಕಿಂತ ಮುಖ್ಯವಾಗಿನಿನ್ನವನಲ್ಲದ ನನ್ನನ್ನು ದುರವಿಡುವ ಪದ್ಧತಿ 'ಅಚ್ಚರಿ ಹುಟ್ಟಿಸುತ್ತದೆ '!"

  ಎಲ್ಲಾ ಹುಡುಗಿಯರೂ ನಿನ್ನ ಹಾಗೆ ಇಷ್ಟು ಗಟ್ಟಿ ಗಿತ್ತಿಯರಾಗಿರುತ್ತಾರಾ..? ಪದದ ಅರ್ಥವೇ ನನಗೆ ಗಾಬರಿ ಹುಟ್ಟಿಸುತ್ತದೆ. ಎಲ್ಲಿ ನನ್ನವಳಲ್ಲವೇನೋ ಎನ್ನುವಂತಿರುವ ನೀನು ಎಂದೆಂದಿಗೂ ನನ್ನನ್ನು ಬಿಟ್ಟು ಬಿಡುತ್ತಿಯಾ ಅಂತ ಕಳವಳವಾಗುತ್ತದೆ.
ಯಾಕೋ ಹೀಗೆ ಹಲವು ಬಾರಿ ಅನ್ನಿಸುತ್ತಿತ್ತು

  ಅದೇನೇ ಹೇಳಿಕೊಂಡರೂ ಅದು ನಿನ್ನ ಬಳಿ ಮಾತ್ರವೆ. ಆದರೆ ಈಗ ಅದಕ್ಕೂ ಅವಕಾಶವಿಲ್ಲವೇನೊ..? 

  ಯಾಕೆ, ಹೇಗೆ, ಏನು, ಎತ್ತ.. ಅಂತೆಲ್ಲಾ ಹೇಳಲು ಬಾಯಿ ತೆರೆದರೆ, ಅದಕ್ಕೂ ಮೊದಲು ನೀನೇ ವಿಷಯಾಂತರಿಸಿ ಮೋಡಿ ಮಾಡುತ್ತೀಯ
  ಅದು ಬೇಕಂತಲೇ ಮಾಡುವ ತಂತ್ರವಾ ಪರೀಕ್ಷಿಸಿರಲಿಲ್ಲ ಇಷ್ಟು ದಿನ. ಯಾಕಂದರೆ ಅದರ ಅವಶ್ಯಕತೆಯೂ ಇರಲಿಲ್ಲ. ಆದರೆ ಈಗ.. 

  ವಿಶೇಷ ನೋಡು
  ಮೊನ್ನೆ ತಾನೆ ಊರಿಗೆ ಹೋಗಿದ್ದಾಗ ಸಿಕ್ಕ ಹಳೇ ಗೆಳತಿ ಹೇಳಿದ ಕಥೆ ಕೇಳಿದ ಮೇಲೆ ಅನ್ನಿಸಿದ್ದು, ‘ನಿನ್ನ ನಿರಾಕರಣೆಗೊಂದು ಅರ್ಥವಿದೆಯೇನೊ..’ ಎಂದು. ಅದರಲ್ಲೂ ಆಕೆ ನಿನ್ನ ವಿಚಾರವಾಗಿ ಈಗಾಗಲೇ ನನ್ನ ಬಳಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಲ್ಲದೆ, ನಿನ್ನನ್ನು ಬಿಟ್ಟುಬಿಡುವಂತೆ ಪ್ರೀತಿಪೂರ್ವಕವಾಗಿ ಆಗ್ರಹಿಸಿದ್ದಳು. ಆದರೆ ನಾನು ಮಾತ್ರ ಹುಂಬ. ನಿನ್ನನ್ನು ಪಡೆದೇ ತೀರುತ್ತೇನೆನ್ನುವ ಹಠ ತೊಟ್ಟು ನಿಂತವ. ಆಗ ಒಳಸುಳಿಗಳೆಡೆಗೆ ನಾನು ಗಮನವಿತ್ತಿರಲಿಲ್ಲ

  ಈಗ ಅದಕ್ಕೆಲ್ಲ ರೆಕ್ಕೆ-ಪುಕ್ಕ, ಕಣ್ಣು, ಬಾಯಿ, ಮೂಗು, ಮುಖ, ಕೈ-ಕಾಲುಗಳು, ಬಾಲ ಹೀಗೆ ಎಲ್ಲವೂ ಸೇರಿಕೊಂಡು ಸಂಪೂರ್ಣ ಆಕೃತಿಯಾಗಿದೆ. ಆದರೆ ನಾನು ಮಾತ್ರ ಕೆಸರಿನ ಹೊಂಡದಲ್ಲಿ ಬಿದ್ದ ಬಲಿಪಶುವಿನಂತಾಗಿದ್ದೇನೆ. ಯಾರ ಬಳಿಯೂ ಹೇಳಿಕೊಳ್ಳಲು ನನಗೊ ಮಾತುಗಳು ಸಾಥ್ ನೀಡುತ್ತಿಲ್ಲ. ನಿನಗಾದರೂ ವಿವರಿಸೋಣವೆಂದರೆ ಈಗಾಗಲೇ ನೀನು ಬೇರೊಬ್ಬನ ಜೊತೆ ಹೆಜ್ಜೆ ಹಾಕುತ್ತಿರುವೆ...

  ಮನಸ್ಸು ಮಾತ್ರ ಆಗಸದೆತ್ತರದಲ್ಲಿ ಹಾರುಡುತ್ತಿರುವ ಸೂತ್ರ ಹರಿದ ಗಾಳಿಪಟದಂತಾಗಿದೆ. ಅದ್ಯಾವ ಮುಳ್ಳಿನ ಮೇಲೆ ಬಿದ್ದು ಹರಿದುಹೋಗುತ್ತದೆಯೋ ಬಲ್ಲವರ್ಯಾರು..??!! 

  ತಂದೆ-ತಾಯಿ, ಅಕ್ಕ-ತಮ್ಮ, ಅಣ್ಣ-ತಂಗಿ, ಬಂಧು-ಬಳಗ, ಹೀಗೆ ಒಂದು ಕುಟುಂಬದ ಮಧ್ಯೆ ಬೆಳೆದು ದೊಡ್ಡವರಾದ ಮೇಲೆ ನಾವೇಕೆ ಬೇರೆಯವರ ಪ್ರೀತಿಗೆ ಹಪಹಪಿಸುತ್ತೇವೆ..?? ಹೀಗಿರುವಾಗ ನಾವು ನಮ್ಮವರಲ್ಲದ ಮತ್ತೊಬ್ಬರನ್ನು ನಾನೆನ್ನುವ ಅಹಂ ಅನ್ನು ತೊರೆದು ಪ್ರೀತಿಸುತ್ತೇವಲ್ಲವೆ..? ಇದರ ಹಿಂದೆ ಬಾಲ್ಯದಲ್ಲಿ ಕಳೆದುಕೊಂಡ ಮಧುರ ಬಾಂಧವ್ಯದ ಕೊರತೆಯಿರುತ್ತದಾ..? ಉತ್ತರಿಸುವವರ್ಯಾರು..??  

=============================================================================== 
#ಸಮುದ್ರ, #ನದಿ, #ನೀರು, #ಆದಿ, #ಅಂತ್ಯ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಅನಿವಾರ್ಯತೆ, #ಭಾರ, #ಉತ್ತರ, #ಹಾಳು #love, #features, #loveandlife, #life, #friends,
Tags: #Features#life#love#loveandlife

Post a Comment

4 Comments

  1. ನಿಜ.. ಬರೆಯೋ ಹೊತ್ತಿಗೆ ಅದ್ಯಾಕೋ ಹಾಗೆ ಅನ್ನಿಸಿದ್ದಂತೂ ಸತ್ಯ..

    ReplyDelete
  2. ಸಾಗರ ಸೇರುವಲ್ಲಿ ಮಾತ್ರ ಸಂತಸ ಎಂಬುದಾದಲ್ಲಿ ತೊರೆಗೆ ತಲುಪಲಾಗದ ಭಯ ಅಥವಾ ನಿರಾಕರಣೆಯ ಪ್ರಶ್ನೆ ಸಹಜ..
    ಹರಿವು ಸಾಗರದೆಡೆಗಿರಲಿ - ಸಂತಸ ಹರಿವಿನಲ್ಲಿರಲಿ - ಒಲವು ಧ್ಯಾನವಾದೀತು - ನಿರಾಕರಣೆಯೇ ಬದುಕ ಶಕ್ತಿಯಾಗಿದೀತು...

    ReplyDelete

Skip to main content