ಮತ್ತೆ ನೀನೇ ಎದುರಿಗೆ ಬಂದು ನಿಂತು ಕಾಡಿಸುತ್ತಿದ್ದೀಯಾ..ಎಷ್ಟೇ ಮರೆಯೋಣವೆಂದರೂ ನೀನು ಮಾತ್ರ ಮಾಗಿ ಚಳಿಯಲ್ಲಿ ಹುಟ್ಟಿ ಬರುವ ಸೂರ್ಯನಂತೆ.. ಹೌದು, ಇಷ್ಟು ದಿನ ಕಾಣೆಯಾಗಿದ್ದ ನೀನು ಈ ಮುಸಾಫಿರ್ನ ಕಣ್ಮುಂದೆ ಹೆಜ್ಜೆ ಹಾಕಿದ್ದು ನೆನಪಿಸಿಕೊಂಡರೆ ಮುಂದಿನ ಏಳೂ ಜನ್ಮಕ್ಕೆ ನಿದ್ದೆ ಬರುವುದಿಲ್ಲ.. ನನಗೆ ಬೇಕಿತ್ತಾ..? ನಿನಗೆ ಬೇಡವಾಗಿತ್ತಾ..? ಅಥವಾ ಅದು ಪರಿಸ್ಥಿತಿಯ ಕೈಗೂಸಾಗಿತ್ತಾ..! ಅದ್ಯಾವುದೂ ಇಂದಿಗೆ ಅಪ್ರಸ್ತುತ. ಆದರೂ ಮತ್ತೆ ಮತ್ತೆ ನೀನು ನನ್ನೊಂದಿಗೆ ಹೃದಯದ ಬಡಿತದಂತೆ ಸದಾ ಇರಬೇಕೆಂದು ಬಯಸುತ್ತದೆ ಈ ಮನ. ಹಾಗಿದ್ದಾಗ ಋತುಗಳೇ ಉರುಳಿದ ಬಳಿಕ ಮಾಘ ಮಾಸದಲ್ಲಿ ನಿನ್ನಾಗಮನ ಬೆಂಕಿಯ ಗೂಡಿನ ಮುಂದೆ ಬೆಚ್ಚಗೆ ಮಲಗಿದ್ದ ಮನಸ್ಸಿಗೆ ಎಚ್ಚರ ತಪ್ಪಿಸುವಂತಾಗಿತ್ತು. ಆಗ ಎದ್ದಿದ್ದು ಒಂದೇ ಪ್ರಶ್ನೆ.. ಏಕೆ ಬಂದೆ? ಉತ್ತರವನ್ನು ಯಾರ ಬಳಿ ಕೇಳಲಿ.. ಹೇಗೆ ಅಂತ ವಿವರಿಸಲಿ ಆ ತಳಮಳ.. ಆದರೂ ಮನದಲ್ಲಿ ಮೂಡಿದ ಸಾವಿರಾರು ಪ್ರಶ್ನೆಗಳಿಗೆ ಮುಗುಳು ನಗುತ್ತಾ ನೀ ಬೀರುವ ಕಣ್ಣೋಟವೊಂದೇ ಉತ್ತರವಾ! ಎಲ್ಲಿ ಹೇಳಿಕೊಳ್ಳಲಿ ಈ ದುಗುಡವನ್ನ.. ಮತ್ತೇಕೆ ಇಂಥ ಡೋಲಾಯಮಾನದಲ್ಲಿ ತಂದು ನಿಲ್ಲಿಸಿ ಬಿಟ್ಟೆ ನನ್ನನ್ನು.. ಉತ್ತರಿಸುವವರ್ಯಾರು? ಎಲ್ಲಾ ಗೊತ್ತಿದ್ದರೂ ನನ್ನ ಬಾಯಲ್ಲೇ ಕೇಳಬೇಕೆನ್ನುವ ನಿನ್ನ ಹಠಮಾರಿತನ...
ಅದೇಕೋ ಗೊತ್ತಿಲ್ಲ. ಏನೇ ಆದರೂ ಎಲ್ಲವನ್ನೂ ನುಂಗಿಕೊಂಡಿರುತ್ತಿದ್ದವನಿಗೆ ಈಗ ಅದೆಲ್ಲವನ್ನೂ ಹೊರಗೆಡವುವ ಆಸೆ. ಆದರೆ ಯಾರ ಬಳಿ ಹೇಳಿಕೊಳ್ಳಲಿ..? ಹೇಗೆ ವಿವರಿಸಲಿ..? ಅವರ ಕಣ್ನೋಟಗಳಿಗೆ ಏನೆಂದು ಉತ್ತರಿಸಲಿ..? ಇಂಥ ಸಾವಿರ ಪ್ರಶ್ನೆಗಳ ಮಧ್ಯೆ ಕೂಡಿ, ಕಳೆದು, ಗುಣಿಸಿ, ಭಾಗಿಸುತ್ತಾ ಸಮಯ ಹಾಳು ಮಾಡುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಮತ್ತೆ ನೆನಪಾದದ್ದು ನೀನು. ಅದೆಲ್ಲವಕ್ಕೂ ನೀನೇ ಸರಿಯಾದ ವ್ಯಕ್ತಿ. ಆಸರೆ ಕೂಡ. ನಿನ್ನ ಎದುರು ಮನದೊಳಗಿನ ಜಂಜಡಗಳನ್ನು ವಿವರಿಸಿ ಹಗುರಾಗಲೇಬೇಕಾದ ಅನಿವಾರ್ಯತೆ ನನಗೆ. ನಿನಗೆ ಅವೆಲ್ಲವೂ ಅರ್ಥವಾಗುತ್ತಾ ಗೊತ್ತಿಲ್ಲ. ಆದರೂ ಅವೆಲ್ಲವನ್ನೂ ನಿನ್ನೊಂದಿಗೆ ಯಾಕೆ ಹೇಳುತ್ತಿದ್ದೇನೆ ಅಂತ ಮಾತ್ರ ಕೇಳಬೇಡ. ಅದನ್ನು ಕೇಳಿದರೂ ಯಾವತ್ತಿಗೂ ಉತ್ತರಿಸಲಾರೆ. ಆದರೆ ನನ್ನೆದೆಯ ಭಾವದ ಭಾರ ಇಳಿಸುವ ಹೊಣೆ ಮಾತ್ರ ನಿನ್ನದು.. ಅದು ನಿನ್ನೊಬ್ಬಳಿಗೇ ಸೇರಿದ್ದು.. ನಾನು ನಾನಾಗಿರಬೇಕು ಅಂತಾದರೆ ನನ್ನೊಳಗಿನ ಮತ್ತೊಂದು ಮುಖವನ್ನು ನಿಂಗೆ ತೋರಿಸಲೇಬೇಕು. ಅದರ ಅರ್ಥ ನಾನು ಕೆಟ್ಟವನು ಅಂತಲ್ಲ. ನನಗೂ ಉಳಿದವರಂತೆ ಮನಸ್ಸಿದೆ. ಅದರೊಳಗೆ ಒಂದಷ್ಟು ಭಾವನೆಗಳಿವೆ. ಸಿಟ್ಟು, ಕೋಪ, ತಾಪ, ದುಃಖ, ನಗು, ಬೇಸರ ಹೀಗೆ ಮೊದಲಾದವೆಲ್ಲವೂ ಬಂದು ಹೋಗುತ್ತಿರುತ್ತವೆ. ಅವೆಲ್ಲವನ್ನೂ ಹೇಳಿಕೊಳ್ಳಲು ನನಗೆ ನಿನ್ನೊಬ್ಬಳ ಹೊರತು ಮತ್ಯಾರೂ ಇಲ್ಲ.! ನಿನ್ನ ...
ಅಂತೂ ಇಂತೂ ಕೊನೆಯ ಮೊಳೆ ಹೊಡೆದಾಗಿದೆ. ಕೊನೆಯ ಪೆಟ್ಟು ಕೊಟ್ಟವರು ಯಾರು ಎನ್ನುವುದು ಅರ್ಥವಾಗದೇ ಉಳಿದಿದ್ದು ಮಾತ್ರ ಸಮಾಧಾನದ ಸಂಗತಿ. ಇದು ಬೇಕಂತಲೇ ಆಗಿದ್ದಾ, ಇಬ್ಬರೂ ಸೇರಿ ಕೈಯ್ಯಾರೆ ಕೊಲೆ ಮಾಡಿದ್ದಾ ವಿವರಣೆ ಅನಗತ್ಯ. ಆದರೂ ಮಾಧುರ್ಯಭರಿತ ಸಂಬಂಧವೊಂದಕ್ಕೆ ಎಳ್ಳು ನೀರು ಬಿಟ್ಟಿರುವುದು ನಿಚ್ಚಳ. ಹಳೆಯ ನೆನಪುಗಳನ್ನು ಕೆದಕಿ ಹೃದಯ ಹೊಲಸು ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಆದರೆ ಮೆದುಳು ಬಿಟ್ಟೂ ಬಿಡದೆ ಮತ್ತೆ ನಿನ್ನಲ್ಲಿಗೇ ತಂದು ನಿಲ್ಲಿಸುತ್ತದೆ. ಯಾಕೆ ಹೀಗಾಗುತ್ತಿದೆ ಗೊತ್ತಿಲ್ಲ. ನಿನ್ನದೇ ಮಡಿಲಲ್ಲಿ ಕನಸನ್ನು ಹೀಗೆ ಸುಮ್ಮನೆ ಬಿಚ್ಚಿಡುವ ದುರಭ್ಯಾಸ ನನ್ನದು. ಅದರರ್ಥ ನಿನಗೊಬ್ಬಳಿಗೆ ಆಗುವುದು! ಒಂದಾನೊಂದು ಕಾಲದಲ್ಲಿ.. ಹೀಗಂದರೆ ತಪ್ಪಾಗುತ್ತದೆ! ಕೆಲವೇ ದಿನದ ಹಿಂದಿನ ಮಾತು.. ಬೆಳಗ್ಗೆ ಎದ್ದ ಮರುಕ್ಷಣ ನನಗೆ ನಿನ್ನ ನೆನಪಾಗುತ್ತಿತ್ತು. ನಿನಗೆ ನಾನು...!! ಮೊಬೈಲ್ ನೋಡಿದರೆ ಕಾಣುತ್ತಿದ್ದುದು ನಿನ್ನದೇ ಸಂದೇಶ. ಅದಕ್ಕೆ ಉತ್ತರಿಸುವುದರ ಒಳಗೆ ನೀನೇ ಮಾತು ಆರಂಭಿಸುತ್ತಿದ್ದೇ. ಹೀಗೆ ಇಬ್ಬರದ್ದೂ ದಿನದಾರಂಭವಾಗುತ್ತಿತ್ತು. ಕೆಲಸಕ್ಕೆ ಹೋಗುವ ಒತ್ತಡವಿದ್ದರೂ ಕನಿಷ್ಠ ಅರ್ಧ ಗಂಟೆಯಾದರೂ ಹರಟುತ್ತಿದ್ದೆವು. ತಿಂಡಿ ತಿಂದು ಮನೆಯಿಂದ ಹೊರ ಬೀಳುವುದರೊಳಗೆ ಮತ್ತೆ ನಿನ್ನದೇ ಫೋನ್. ಅದಿಲ್ಲದ...
2014ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನ Himalayan Mountaineering Institution ನಲ್ಲಿ Advance Mountaineering Course ಮುಗಿಸಿದೆ . ಅದರ ಒಂದಷ್ಟು ಸವಿನೆನಪಿನ ಚಿತ್ರಗಳು .. ಇಲ್ಲಿವೆ . ಸುಮಾರು ೮೦೦ಕ್ಕೂ ಅಧಿಕ Photo ಗಳನ್ನ ತೆಗೆದಿದ್ದರು ಎಲ್ಲವನ್ನೂ ಹಾಕಲು ಸಾಧ್ಯವಾಗಿಲ್ಲ . ಅಲ್ಲಿನ ಅನುಭವಗಳ ಬಗ್ಗೆ ಎಷ್ಟು ಬರೆದರೂ ಅದೊಂದು ರೀತಿಯಲ್ಲಿ ಕುರುಡರು ಆನೆಯನ್ನು ವಿಶ್ಲೇಷಿಸಿದಂತೆ . ಕ್ಯಾಂಪ್ ಆರಂಭದ ನಾಲ್ಕು ದಿ ನ ಮುಂಜಾನೆ ೬ - ೭ ಕಿ . ಮೀ . ಜಾಗಿಂಗ್ , ಬಳಿಕ ದೊಡ್ಡ ಬಂಡೆಗಳನ್ನು ಹತ್ತುವ ತರಬೇತಿ , artificial wall climbing, ಹೀಗೆ ಹಲವು ಸಾಹಸಗಳನ್ನು ಮಾಡಿದ್ದೇವೆ . ಅಲ್ಲಿಂದ ಸಿಕ್ಕಿಂನ ದಕ್ಷಿಣ ತುದಿಯಲ್ಲಿರುವ ಕಾಂಚನಜಂಗಾ ರಾಷ್ಟೀಯ ಉದ್ಯಾನದಲ್ಲಿ ಸುಮಾರು ೫೦ ಕಿ . ಮೀ . ನಡೆದಿದ್ದು , ೧೨ , ೫೦೦ ಎತ್ತರದಲ್ಲಿರುವ ಹೆಚ್ . ಎಂ . ಐ . ಬೇಸ್ ಕ್ಯಾಂಪ್ ನಲ್ಲಿ ವಾಸ್ತ್ಯವ್ಯ ಹೂಡಿದ್ದು , ಮೂರು ದಿನಗಳ ನಂತರ ಅಲ್ಲಿಂದ ಮತ್ತೆ ೧೪ , ೦೦೦ ಅಡಿ ಎತ್ತರದಲ್ಲಿರುವ ಮತ್ತೊಂದು ಕ್ಯಾಂಪ್ ಗೆ ಹೋಗಿ , ಹಿಮದ ಮಡಿಲಲ್ಲಿ ವಾರಗಳ ಕಾಲ ಟೆಂಟ್ ಹಾಕಿ ತಂಗಿದ್ದು , ಹಿಮ ಪರ್ವತ ಹತ್ತಲು ಬೇಕಾದ ಹಲವು ತಾಂತ್ರಿಕ ತರಬೇತಿಯನ್ನು ...
ರುದ್ರರೋಮಾಂಚಕ ಸಾಹಸ - ಸಾಧನೆ - ಭಾವೋಲ್ಲಾಸಗಳ ಅಪೂರ್ವ ಸಂಗಮ ಎವರೆಸ್ಟ್ ಮೇಲೆ ನೂರಾರು ಪರ್ವತಾರೋಹಿಗಳು ಹತ್ತಿಳಿದಿದ್ದರೂ ಇತಿಹಾಸದ ನೆನಪಿನಲ್ಲಿ ಅಚ್ಚಳಿಯದೇ ಉಳಿದಿರುವುದು 1996 ರ ಮೌಂಟ್ ಎವರೆಸ್ಟ್ ಡಿಸಾಸ್ಟರ್ . ಈ ಪರ್ವತಾರೋಹಣದ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡು ಚಂಡಮಾರುತದ ಪರಿಣಾಮದಿಂದಾಗಿ ವಿಶ್ವದ ಅತಿ ಎತ್ತರದ ಪರ್ವತದ ಮೇಲೂ ಪ್ರತಿಕೂಲ ವಾತಾವರಣವೇರ್ಪಡುತ್ತದೆ . ಆ ವೇಳೆಗೆ ಚಾರಣದ ಅಂತಿಮ ಚರಣದಲ್ಲಿದ್ದ ಪರ್ವತಾರೋಹಿಗಳಲ್ಲಿ 15 ಜನ ಸಾವಿಗೀಡಾಗುತ್ತಾರೆ . ಇಂದಿಗೂ ಇದನ್ನು ಎವರೆಸ್ಟ್ ಇತಿಹಾಸದಲ್ಲಿ ಕೆಟ್ಟ ವರ್ಷ ಎಂದೇ ಹೇಳುತ್ತಾರೆ . ಇದೇ ಕಥೆ ಆಧರಿಸಿದ ಹಾಲಿವುಡ್ ಮೂವಿ ‘ ಎವರೆಸ್ಟ್ ’ . ನಿರ್ದೇಶಕ ಬಾಲ್ಟಸಾರ್ ಕೂರ್ಮಕೂರ್ ಕೈಲಿ ಅರಳಿದ ಸಾಹಸ , ರೊಮಾಂಚನಕಾರಿ 3 ಡಿ ಚಿತ್ರ ತೆರೆಗೆ ಬಂದಿದೆ . ವಿಶ್ವದೆಲ್ಲೆ ಚಿತ್ರಕ್ಕೆ ವಿಭಿನ್ನ ಪ್ರತಿಕ್ರಿಯೆ ಲಭ್ಯವಾಗಿದ್ದರೂ ಒಮ್ಮೆ ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜವೇ ಬೇರೆ . ಎವರೆಸ್ಟ್ ಚಿತ್ರದ still 'ಎವರೆಸ್ಟ್' .. ವಿಶ್ವದ ಅತಿ ಎತ್ತರದ ಪರ್ವತ (8848 ಮೀ . ಅಥವಾ 29,029 ಅಡಿಗಳು ). ಈ ಪರ್ವತವನ್ನ 1953 ರಲ್ಲಿ ಮೊದಲ ಬಾರಿಗೆ ಎಡ್ಮಂಡ್ ಹಿಲರಿ ಹಾಗೂ ತೇನ್ಸಿಂಗ್ ನೋರ್ಗೆ ಆರೋಹಣ ಮಾಡಿದ ಬ...
ಅದು ಸಂಜೆಯ ವೇಳೆ. ಕಾಲೇಜಿನ ದಿನದಂತ್ಯದ ಕೊನೆಯ ಕ್ಲಾಸ್ ಬಾಕಿ ಇತ್ತು. ಆ ವೇಳೆಗೆ ತರಗತಿಯ ಒಳಗೆ ಬಂದ ಮನಃಶಾಸ್ತ್ರದ ಉಪಾಧ್ಯಾಯರು, 'ಒಂದು ಆಟವಾಡೋಣ' ಎಂದರು. ಮನಃಶಾಸ್ತ್ರದ ಅಧ್ಯಾಪಕರಿಗೂ ಆಟಕ್ಕೂ ಎತ್ತಣ ಸಂಬಂಧ ಅಂತ ವಿದ್ಯಾರ್ಥಿಗಳಿಗೆಲ್ಲ ಅಚ್ಚರಿಯಾಯ್ತು. ತಕ್ಷಣ ಒಬ್ಬ ವಿದ್ಯಾರ್ಥಿಯನ್ನು ಸ್ವ-ಇಚ್ಛೆಯಿಂದ ಮುಂದೆ ಬರುವಂತೆ ಹೇಳಿದರು. ಆಗ ಸಾಗರಿಕಾ ಎಂಬ ಹುಡುಗಿ ಎದ್ದು ಬಂದಳು. 'ನಿನಗೆ ಅತಿ ಇಷ್ಟವಾದ ೩೦ ಜನರ ಹೆಸರನ್ನು Blackboard ಮೇಲೆ ಬರೆ' ಎಂದು ಆ ಶಿಕ್ಷಕಿ ಹೇಳಿದರು. ಅದೇ ರೀತಿ ಸಾಗರಿಕಾ, ತನ್ನ ಕುಟುಂಬದವರು, ಬಂಧುಗಳು, ಸ್ನೇಹಿತರು, ಸಹಪಾಠಿಗಳು, ಅಕ್ಕ-ಪಕ್ಕದ ಮನೆಯವರು, ಹೀಗೆ ೩೦ ಜನರ ಹೆಸರುಗಳನ್ನು ಬರೆದಳು. ಆಗ ಟೀಚರ್, ಅದರಲ್ಲಿ ಅಷ್ಟು ಮುಖ್ಯವಲ್ಲ ಎನ್ನುವ ಮೂರು ಹೆಸರುಗಳನ್ನು ಅಳಿಸುವಂತೆ ಸಾಗರಿಕಾಗೆ ಸೂಚಿಸಿದರು. ಅದರಂತೆ ಸಾಗರಿಕಾ ತನ್ನ ಮೂರು ಸಹಪಾಠಿಗಳ ಹೆಸರನ್ನು ಅಳಿಸಿದಳು. ಟೀಚರ್ ಮತ್ತೆ ಐದು ಹೆಸರುಗಳನ್ನು ತೆಗೆಯುವಂತೆ ಹೇಳಿದರು. ಸಾಗರಿಕಾ, ನೆರೆ ಮನೆಯವರ ಐದು ಹೆಸರುಗಳನ್ನು ಒರೆಸಿದಳು. ಇದೇ ಪ್ರಕ್ರಿಯೆ ಮುಂದುವರಿದು ಕೊನೆಯ ನಾಲ್ಕು ಹೆಸರುಗಳು ಮಾತ್ರ Blackboard ನಲ್ಲಿ ಉಳಿದುಕೊಂಡಿದ್ದವು. ಅವು, ಆಕೆಯ ತಂದೆ, ತಾಯಿ, ಗಂಡ ಹಾಗು ಇದ್ದೊಬ್ಬ ಮಗನದ್ದಾಗಿತ್ತು. ಆಗ...
ನೀನಿಲ್ಲದಿದ್ದಾಗ ನಿನ್ನ ಮನೆಗೆ ಹೋಗಿ ಬಂದಿದ್ದೇನೆ. ಅದೂ ಒಂದಲ್ಲ.. ಮೂರ್ನಾಲ್ಕು ಬಾರಿ..! ಆ ಹೆತ್ತ ತಾಯಿಯ ಪ್ರೀತಿ-ವಿಶ್ವಾಸ, ಮನೆಯೊಡೆಯನ ಆದರಾತಿಥ್ಯ, ದೊಡ್ಡಕ್ಕನ ಕೈ ಅಡುಗೆ, ತಮ್ಮನ ಬಾಂಧವ್ಯ, ಪುಟ್ಟ ತಂಗಿಯ ತುಂಟಾಟ, ನನ್ನಂಥ ಒರಟನನ್ನೂ ಕಳೆದು ಹೋಗುವಂತೆ ಮಾಡಿದ್ದಂತೂ ಸತ್ಯ.. ಹುಟ್ಟಿದ್ದು ಒಂದೂರಿಯಲ್ಲಿ.. ಬೆಳೆದದ್ದು ಮತ್ತೊಂದೂರಿನಲ್ಲಿ.. ಜೀವನ ನಡೆಸುತ್ತಿರೋದು ಮಗದೊಂದೂರಿನಲ್ಲಿ.. ಈ ಜಗ ಕಂಡಾಗಿನಿಂದಲೂ ಒಂಟಿ ಪಿಶಾಚಿಯೇ ಒಂದರ್ಥದಲ್ಲಿ..! ಸುತ್ತಲೂ ಗೆಳೆಯರಿದ್ದರೂ ನಾನು ಮಾತ್ರ ಸಾಗರದ ದಡದಲ್ಲಿ ಬೀಡು ಬಿಟ್ಟ ನೌಕೆಯಂತೆ.. "दोस्तों की ख़ातिर जिंदगि देसक्ता हूं। मगर ऐसे दोस्त किसीको भी मिलते नहीं है।।" ನನ್ನೆಲ್ಲಾ ಗೆಳೆಯರಿಗೂ ಅವರದ್ದೇ ಆದ ಸ್ವಂತದ್ದೊಂದು ಬದುಕಿದೆ. ಆದರೆ ನನಗೆ ಅವರೇ ಜೀವನ. ಸ್ನೇಹಿತರಿದ್ದರೇ ಸೂರ್ಯೋದಯ.. ಚಂದ್ರೋದಯ.. ಅವರಿಲ್ಲದಿದ್ದರೆ ಅಮಾವಾಸ್ಯೆಯ ಕಾರ್ಗತ್ತಲು.!! ಹಾಗಿದ್ದ ಜೀವನಕ್ಕೆ ನೀನ್ಯಾಕೆ ಕಾಲಿಟ್ಟೆ..? ಹೇಗೆ? ಯಾಕೆ? ಯಾವ ಮುಹೂರ್ತದಲ್ಲಿ ಈ ಪುಟ್ಟ ಹೃದಯದೊಡತಿಯಾದೆ? ಯಾರನ್ನು ಕೇಳಲಿ...! ಉತ್ತರ ಹೇಳುವವರ್ಯಾರು? ನಿನ್ನನ್ನು ಕೇಳೋಣವೆಂದರೆ ಮಾತಿನೊಂದಿಗೆ ವಿರಸವಾಡುತ್ತಾ.. ಮೌನದೊಂದಿಗೆ ಸರಸವಾಡುತ್ತ ಹೆಜ್ಜೆ ಹಾಕುತ್ತಿಯ.. ನಿನ್ನೆಡೆಗೆ ಬರುವ ಎಲ್ಲ ಹಾದಿಗಳೂ ಮುಚ್ಚಿ ಹೋಗಿವೆಯ? ಅಥವಾ ನೀನ...
ಅಪರೂಪಕ್ಕೆ ಇರೋ ಕೆಲಸಕ್ಕೆ ವಿರಾಮವಿಟ್ಟು ಕಾಡು ಸುತ್ತೋಕೆ ಹೋಗಿದ್ದೆ. ಅದೂ ಒಂದಿಬ್ಬರ ಜೊತೆ ಮಾತ್ರ. ಕೇವಲ ಎರಡೇ ದಿನ ತಿರುಗಾಟ ನಡೆಸಿದ್ರು ವರ್ಷಗಳಿಗಾಗೋವಷ್ಟು ನೆನಪನ್ನ ಕಟ್ಟಿಕೊಂಡೇ ಬಂದಿದ್ದೇನೆ. ಆ ಜಾಗ ನನ್ನೂರಿನ ಕಾಡಿಗಿಂತ ಹೆಚ್ಚೇನೂ ವ್ಯತ್ಯಾಸವಿಲ್ಲ.. ಅಲ್ಲಿ ಸದಾ ಜಿಟಿಗುಡುತ್ತ ಸುರಿಯುವ ಸೋನೆ ಮಳೆ, ವರ್ಷವಿಡೀ ಹಸಿರಿನಿಂದ ಕಂಗೊಳಿಸುವ ನಿತ್ಯಹರಿದ್ವರ್ಣ ಕಾಡು, ಕಾಲಿಟ್ಟಲ್ಲಿ ಕಾಟಕೊಡುವ ಉಂಬಳ, ನಡೆದಷ್ಟೂ ಸವೆಯದ ಹಾದಿ, ಜೊತೆಗೊಬ್ಬ ಗೆಳೆಯ, ಕೈಯಲ್ಲಿ ಪುಟ್ಟ ಕ್ಯಾಮರಾ, ಇವಷ್ಟನ್ನೂ ಹಿಡಿದು ಸುತ್ತಾಡಿ ಬಂದಿದ್ದೇನೆ. ಅಲ್ಲಿನ ಒಂದಷ್ಟು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗಿಷ್ಟವಾದ ಕೆಲವು ಫೋಟೋಗಳನ್ನ ನಿಮ್ಮೆದುರಿಗಿಡುತ್ತಿದ್ದೇನೆ.
ಸಂದರ್ಶನ : ಶ್ರೀಪಾದ ಕವಲಕೋಡು. ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾಸಮಾರಾಧನಾ ಮಹೋತ್ಸವವು ಜ.೯ರಿಂದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಹೊಸದಿಗಂತ ಸಂದರ್ಶಿಸಿದಾಗ ತಮ್ಮ ಅಂತರಾಳ ಹಂಚಿಕೊಳ್ಳುವ ಮೂಲಕ ಭಕ್ತರಿಗೆ ಸಂದೇಶವನ್ನೂ ನೀಡಿದ್ದಾರೆ. * ಶಿಷ್ಯರಾಗಿ ಗುರುಗಳನ್ನು ಹೇಗೆ ಸ್ಮರಿಸುತ್ತೀರಿ? ಅವರು ಎಂದಿಗೂ ಒಂಟಿಯಾಗಿ ಇರುವವರಲ್ಲ. ಸಮಾಜದ ಎಲ್ಲರೊಂದಿಗೆ ಬೆರೆತಿರುವವರು. ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುವವರು. ಮತ್ತೊಬ್ಬರ ನೋವು ನಲಿವುಗಳಲ್ಲಿ ಸಹಭಾಗಿಯಾಗುವವರು. ಜೊತೆಯಲ್ಲಿ ತಮ್ಮ ಅಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಯನ್ನೂ ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇಂತಹ ಗುರುಗಳನ್ನು ಪಡೆದ ನಾವು, ಅವರ ಶಿಷ್ಯರಾಗಲು ಪುಣ್ಯ ಮಾಡಿದ್ದೆವು. ಶಾಸ್ತ್ರಾಧ್ಯಯನ ಹೊರತುಪಡಿಸಿ, ಉಳಿದೆಲ್ಲವನ್ನೂ ಗುರುಗಳ ಬದುಕನ್ನು ಗಮನಿಸಿಯೇ ಕಲಿತಿದ್ದು. ಹೀಗೇ ಇರಬೇಕು ಎನ್ನುವುದು ಎಲ್ಲರಿಗೂ ಪಾಠ. ಬದುಕಿದ ರೀತಿಯಿಂದಾಗಿ ಪಾಠ ಮಾಡಿದ್ದೇ ಹೊರತು, ಮಾತುಗಳ ಮೂಲಕ ಮಾಡಿದ್ದಿಲ್ಲ. ಬದುಕಿನ ಕ್ರಮವನ್ನು ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ. * ಗುರುಗಳೊಂದಿಗಿನ ಒಡನಾಟ ಹೇಗಿತ್ತು? ಆರಂಭದ ೪ ವರ್ಷ ಅಧ್ಯಯನಕ್ಕಾಗಿ ಅವರೊಂದಿಗೇ ಸದಾ ...
0 Comments