ಅಪರೂಪಕ್ಕೆ ಇರೋ ಕೆಲಸಕ್ಕೆ ವಿರಾಮವಿಟ್ಟು ಕಾಡು ಸುತ್ತೋಕೆ ಹೋಗಿದ್ದೆ. ಅದೂ ಒಂದಿಬ್ಬರ ಜೊತೆ ಮಾತ್ರ. ಕೇವಲ ಎರಡೇ ದಿನ ತಿರುಗಾಟ ನಡೆಸಿದ್ರು ವರ್ಷಗಳಿಗಾಗೋವಷ್ಟು ನೆನಪನ್ನ ಕಟ್ಟಿಕೊಂಡೇ ಬಂದಿದ್ದೇನೆ. ಆ ಜಾಗ ನನ್ನೂರಿನ ಕಾಡಿಗಿಂತ ಹೆಚ್ಚೇನೂ ವ್ಯತ್ಯಾಸವಿಲ್ಲ..

   ಅಲ್ಲಿ ಸದಾ ಜಿಟಿಗುಡುತ್ತ ಸುರಿಯುವ ಸೋನೆ ಮಳೆ, ವರ್ಷವಿಡೀ ಹಸಿರಿನಿಂದ ಕಂಗೊಳಿಸುವ ನಿತ್ಯಹರಿದ್ವರ್ಣ ಕಾಡು, ಕಾಲಿಟ್ಟಲ್ಲಿ ಕಾಟಕೊಡುವ ಉಂಬಳ, ನಡೆದಷ್ಟೂ ಸವೆಯದ ಹಾದಿ, ಜೊತೆಗೊಬ್ಬ ಗೆಳೆಯ, ಕೈಯಲ್ಲಿ ಪುಟ್ಟ ಕ್ಯಾಮರಾ, ಇವಷ್ಟನ್ನೂ ಹಿಡಿದು ಸುತ್ತಾಡಿ ಬಂದಿದ್ದೇನೆ. ಅಲ್ಲಿನ ಒಂದಷ್ಟು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗಿಷ್ಟವಾದ ಕೆಲವು ಫೋಟೋಗಳನ್ನ ನಿಮ್ಮೆದುರಿಗಿಡುತ್ತಿದ್ದೇನೆ.

 

















Tags: #Photogallery#tourmemories#travel

Post a Comment

5 Comments

  1. ಅದ್ಭುತ ಜಾಗ..
    ಯಾವ ಊರು ಹೇಳೋ..

    ReplyDelete
  2. ಸೂಪರ್ ಶ್ರೀಪಾದ್‌, ಯಾವ ಊರು ಇದು. ಅರಳುತ್ತಿರುವ ಅಣಬೆ ಫೋಟೋವಂತೂ ಇನ್ನೂ ಸೂಪರ್ ಗ್ರೇಟ್..!

    ReplyDelete
  3. This comment has been removed by the author.

    ReplyDelete

Skip to main content