ಬದುಕಬೇಕು ನೀನಿರದ ನಾಳೆಗಳಿಗಾಗಿ.. 
ಬದುಕಬೇಕು ಮತ್ತೊಬ್ಬಳ ಬರುವಿಕೆಗಾಗಿ.. 
ಬದುಕಬೇಕು ನನ್ನೊಲುಮೆಯ ಪ್ರೇಯಸಿಗಾಗಿ.. 

ಬದುಕಬೇಕು ನನ್ನೆಲ್ಲ ಕನಸುಗಳಿಗಾಗಿ.. 
ಬದುಕಬೇಕು ನನ್ನಾಸೆಗಳ ಪೂರೈಕೆಗಳಿಗಾಗಿ.. 
ಬದುಕಬೇಕು ಜಗವಿಟ್ಟ ನಂಬಿಕೆಗಳಿಗಾಗಿ.. 

ಬದುಕಬೇಕು ಒಡಲೊಳಗಿನ ಬೇಗುದಿಗಳಿಗಾಗಿ.. 
ಬದುಕಬೇಕು ಎದೆಯಾಳದ ಕಣ್ಣೀರಿಗಾಗಿ..
ಬದುಕಬೇಕು ಮೌನದಾಚೆಗಿನ ಮಾತಿಗಾಗಿ.. 

ಬದುಕಬೇಕು ಹೃದಯವೀಣೆ ನುಡಿಸುವಾಕೆಗಾಗಿ.. 
ಬದುಕಬೇಕು ಶೃಂಗಾರಸುಧೆ ಹರಿಸುವಾಕೆಗಾಗಿ.. 
ಬದುಕಬೇಕು ಬಾಳಿನ ಅರ್ಥ ವಿವರಿಸುವಾಕೆಗಾಗಿ.. 

ಆದರೂ ಬದುಕಲೇಬೇಕು ನೀನಿರದ ನಾಳೆಗಳಿಗಾಗಿ.. 

====================================================================
#love, #ಬದುಕು, #features, #ಪ್ರೇಯಸಿ, #poems, #ಕನಸು, #dreams, #life, #ಹೃದಯ #ವೀಣೆ #ನುಡಿಸು, #ಶೃಂಗಾರ #ಸುಧೆ #ಅರ್ಥ #ವಿವರಿಸು, #ನಾಳೆ, #ನಂಬಿಕೆ, #
Tags: #Features#life#love#Poems

Post a Comment

0 Comments

Skip to main content