ಬಾರದ ಹುಡುಗಿಗೆ ಭಾರದ ಹೃದಯದ ಭಾವಪೂರ್ಣ ಪತ್ರ
ನೀನಿಲ್ಲದಿದ್ದಾಗ ನಿನ್ನ ಮನೆಗೆ ಹೋಗಿ ಬಂದಿದ್ದೇನೆ. ಅದೂ ಒಂದಲ್ಲ.. ಮೂರ್ನಾಲ್ಕು ಬಾರಿ..! ಆ ಹೆತ್ತ ತಾಯಿಯ ಪ್ರೀತಿ-ವಿಶ್ವಾಸ, ಮನೆಯೊಡೆಯನ ಆದರಾತಿಥ್ಯ, ದೊಡ್ಡಕ್ಕನ ಕೈ ಅಡುಗೆ, ತಮ್ಮನ ಬಾಂಧವ್ಯ, ಪುಟ್ಟ ತಂಗಿಯ ತುಂಟಾಟ, ನನ್ನಂಥ ಒರಟನನ್ನೂ ಕಳೆದು ಹೋಗುವಂತೆ ಮಾಡಿದ್ದಂತೂ ಸತ್ಯ.. ಹುಟ್ಟಿದ್ದು ಒಂದೂರಿಯಲ್ಲಿ.. ಬೆಳೆದದ್ದು ಮತ್ತೊಂದೂರಿನಲ್ಲಿ.. ಜೀವನ ನಡೆಸುತ್ತಿರೋದು ಮಗದೊಂದೂರಿನಲ್ಲಿ.. ಈ ಜಗ ಕಂಡಾಗಿನಿಂದಲೂ ಒಂಟಿ ಪಿಶಾಚಿಯೇ ಒಂದರ್ಥದಲ್ಲಿ..! ಸುತ್ತಲೂ ಗೆಳೆಯರಿದ್ದರೂ ನಾನು ಮಾತ್ರ ಸಾಗರದ ದಡದಲ್ಲಿ ಬೀಡು ಬಿಟ್ಟ ನೌಕೆಯಂತೆ.. "दोस्तों की ख़ातिर जिंदगि देसक्ता हूं। मगर ऐसे दोस्त किसीको भी मिलते नहीं है।।" ನನ್ನೆಲ್ಲಾ ಗೆಳೆಯರಿಗೂ ಅವರದ್ದೇ ಆದ ಸ್ವಂತದ್ದೊಂದು ಬದುಕಿದೆ. ಆದರೆ ನನಗೆ ಅವರೇ ಜೀವನ. ಸ್ನೇಹಿತರಿದ್ದರೇ ಸೂರ್ಯೋದಯ.. ಚಂದ್ರೋದಯ.. ಅವರಿಲ್ಲದಿದ್ದರೆ ಅಮಾವಾಸ್ಯೆಯ ಕಾರ್ಗತ್ತಲು.!! ಹಾಗಿದ್ದ ಜೀವನಕ್ಕೆ ನೀನ್ಯಾಕೆ ಕಾಲಿಟ್ಟೆ..? ಹೇಗೆ? ಯಾಕೆ? ಯಾವ ಮುಹೂರ್ತದಲ್ಲಿ ಈ ಪುಟ್ಟ ಹೃದಯದೊಡತಿಯಾದೆ? ಯಾರನ್ನು ಕೇಳಲಿ...! ಉತ್ತರ ಹೇಳುವವರ್ಯಾರು? ನಿನ್ನನ್ನು ಕೇಳೋಣವೆಂದರೆ ಮಾತಿನೊಂದಿಗೆ ವಿರಸವಾಡುತ್ತಾ.. ಮೌನದೊಂದಿಗೆ ಸರಸವಾಡುತ್ತ ಹೆಜ್ಜೆ ಹಾಕುತ್ತಿಯ.. ನಿನ್ನೆಡೆಗೆ ಬರುವ ಎಲ್ಲ ಹಾದಿಗಳೂ ಮುಚ್ಚಿ ಹೋಗಿವೆಯ? ಅಥವಾ ನೀನ...
0 Comments