So, Life ಯಾಕೆ ಹೀಗೆ ಮತ್ತೆ ಮತ್ತೆ ತಿರುಗಿಸಿ ತಿರುಗಿಸಿ ಅದೇ ಕ್ಷಣಕ್ಕೆ ಅಥವಾ ಅದೇ ಸ್ಥಳಕ್ಕೆ ತಂದು ನಿಲ್ಲಿಸುತ್ತದೆಯೋ ತಿಳಿಯದು..!!

   ಇಂದು ಮತ್ತೆ ನಾನು ನನ್ನ ತವರಿಗೆ ಹೊರಟಿದ್ದೇನೆ. ಅದೂ ಪರೀಕ್ಷೆಗಳನ್ನು ಮುಗಿಸಿ.! ಆದರೆ ಅಂದಿಗೂ ಇಂದಿಗೂ ವ್ಯತ್ಯಾಸ ಮಾತ್ರ ನಿಚ್ಚಳ.

   ಅಂದು ನಿನ್ನ ಗೆಳತಿಯರ ಗುಂಪಿತ್ತು. ನೀನೇ ಹುಡುಕಿಕೊಂಡು ಬಂದು ಆಡಿದ ಮಾತಿತ್ತು.. ಮಾತು ಮುಗಿದ ಮೇಲೆ ಉಳಿದ ಆ ಒಂದು ಕ್ಷಣದ ಮೌನವಿತ್ತು.. ನಾನು ಒಬ್ಬಂಟಿಯಾಗಿ ಉತ್ತರಿಸಲೂ ತೋಚದೆ ಮಾತು ಮರೆತ ಆ ಘಳಿಗೆ ಇತ್ತು.. ಮನದ ತುಂಬೆಲ್ಲ ಆಡದೇ ಉಳಿದ ಮಾತಿನೊಡನೆ ಮರೆಯಾದ ಹೆಸರಿಡದ ಸ್ಥಿತಿ ಮುಂದುವರಿದಿತ್ತು.. ಎಲ್ಲಕ್ಕಿಂತಲೂ ಮಿಗಿಲಾಗಿ ಎದುರಿಗೆ ನೀನಿದ್ದೆ ಎನ್ನುವ ಸಮಾಧಾನವಿತ್ತು..

   ಆದರೆ ಈಗಾಗಲೇ ನೀನು ಹೊರಟು ಹೋಗಿ ದಿನಗಳುರುಳಲಿ ವರುಷ ಕಳೆದಿವೆ. ನಾನು ಮಾತ್ರ ಉಳಿದಿದ್ದೇನೆ, ನಿನ್ನ ನಿರೀಕ್ಷೆಯಲ್ಲಿ..!
   ನವೆಂಬರ್‌‌- ಡಿಸೆಂಬರ್‌‌ನ ಈ ಸಮಯದಲ್ಲಿ ಕಾಲೇಜು ಪರೀಕ್ಷೆಗಳೆಲ್ಲ ಮುಗಿಯುತ್ತಾ ಬಂದಿವೆ. ಹಗಲೆಲ್ಲಾ ಹೊರಗೆ ಛಳಿ ತುಂಬಿದ ಬಿಸಿಲ ವಾತಾವರಣ. ಕಾಲೇಜಿನ ಆ ಲೈಬ್ರರಿ ಕಟ್ಟೆ ಪ್ರತೀ ದಿನ ಮಧ್ಯಾಹ್ನವೂ ನನ್ನನ್ನು ಕೈಹಿಡಿದು ಜಗ್ಗಿ ಕರೆಯುತ್ತದೆ ತನ್ನೆಡೆಗೆ. ಹೋಗಲು ಮಾತ್ರ ಮನಸ್ಸಿಲ್ಲ. ಹೋದರೂ ಸುಮ್ಮನೆ ಒಬ್ಬಂಟಿಯಾಗಿ ಕುಳಿತು ಸಮಯ ಕಳೆಯಲು ನನ್ನಿಂದಾಗದು. ಹೀಗೆ ಉದ್ದೇಶವೇ ಇಲ್ಲದೆ ಯಾರಿಗಾಗಿ ಕಾದು ಕುಳಿತಿರಲಿ..?

   ಬಂದು ಹೋಗುವವರೆಲ್ಲಾ ಪ್ರಶ್ನಿಸುತ್ತಾರೆ ಏನು ಮಾಡುತ್ತಿರುವೆ ಎಂದು..?  ತಿರುಗಿ ಉತ್ತರಿಸಲೂ ಬಾರದೆ ಕುಳಿತಿರಲೇ ಅಲ್ಲಿ..! ಹೊರಗಿನ ಚಳಿಗೆ ಹೆದರದೆ ನಿಲ್ಲಬಲ್ಲೆ. ಆದರೆ ಮನದೊಳಗಿನ ಮಾತಿಗೆ ಏನೆಂದು ಹೇಳಲಿ..?

   ನನ್ನ ಮನದೊಳಗೆ ಉದ್ಭವಿಸುವ ಎಲ್ಲವಕ್ಕೂ ತಿಳಿ ಹೇಳುವುದು ಕಾಲವೊಂದೇ ಏನೋ..?  ಏಕೆಂದರೆ ನೀನು ಎದುರಿಗಿದ್ದಾಗಲೇ ಆಗದಿರುವುದು ಇಂದು ನಡೆಯುತ್ತದೆ ಎಂದು ಹೇಗೆ ನಿರೀಕ್ಷಿಸಲಿ...?

    ಜೀವನ ಕಲಿಸುವ ಪಾಠಗಳನ್ನು ತೆರೆದ ಮನಸ್ಸಿನಿಂದ ಒಪ್ಪಿ, ಅಪ್ಪಿಕೊಳ್ಳುತ್ತೇನೆ. ಅದರ ಅನಿವಾರ್ಯತೆಯೂ ನನಗಿದೆ. ಆಗಲಾದರೂ ಇ ಪುಟ್ಟ ಹೃದಯ ಸ್ವಲ್ಪ ಸಮಾಧಾನ ಹೊಂದಬಹುದೇನೋ ಅಲ್ಲವೆ..?

   ನೀನು ಎದುರಿಗಿಲ್ಲ ಎಂದು ಕೊರಗುವುದಕ್ಕಿಂತ ನನ್ನನ್ನು ಪ್ರೀತಿಸುವವರ ಬರುವಿಕೆಗೆ ಕಾಯಲೇ..!!

   ಮಾಘದಲ್ಲಿ ಉದುರುವ ತರೆಗೆಲೆಯಂತಾದ ಮನಕ್ಕೆ ಯುಗಾದಿ ಎಂದೋ..??!! 

======================================================================= 
#love, #college, #features, #loveandlife, #life, #ಸಮುದ್ರ, #ನೀರು, #ಆದಿ, #ಬದುಕು, #ಬಣ್ಣ, #ಹಳತು, #ನಾನು #ನೀನು #ಭಾವ, #ಬಯಕೆ, #ಹಂಗು, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #ಮಹಾನದಿ, #ಬದಲು, #ಆತ್ಮವಿಶ್ವಾಸ, #ಪ್ರೀತಿ, #ಪ್ರೇಮ, #ಅಭಿಮಾನ, #ಸಮಯ, #ಹೆಗಲು, #ಆಸರೆ, #ಅನಿವಾರ್ಯತೆ, #ಭಾರ, #ಉತ್ತರ, #ಹಾಳು #ಯುಗಾದಿ #ಮಾಘ #ಹೃದಯ #ಸಮಾಧಾನ 
Tags: #Features#life#love#loveandlife

Post a Comment

2 Comments

  1. ಲೇಖನ ಚೆನ್ನಾಗಿದೆ. ಗೊಂದಲಗಳು ಬರವಣಿಗೆಗೆ ಮಾತ್ರ ಸೀಮಿತವಾಗಿರಲಿ. ಬದುಕಿಗೆಲ್ಲ. ಅಕ್ಷರ ಹರಿವು ಹೀಗೆ ನಿರಂತರವಾಗಿರಲಿ...

    ReplyDelete

Skip to main content