ಕಳೆದು ಹೋಗಿಯಾಗಿದೆ.... ಮತ್ತೆ ಹುಡುಕಲೇಬೇಕೆಂಬ ಹಪಹಪಿಯೂ ಹುಟ್ಟುತ್ತಿಲ್ಲ. ಅದೇಕೋ ಬೇಸರದ ಭಾವ ನೀಗಿಸಲು ಮತ್ತೊಮ್ಮೆ ಎದೆಯಾಳದಿಂದ ಮೂಡಣದ ನೇಸರನಂತೆ ಉದಯಿಸಿರುವೆ ನೀನು.... ನಮ್ಮಿಬ್ಬರ ಕಳೆದಳಿದುಳಿದ ಭೂತಕಾಲದ ಬಗ್ಗೆ ಇತ್ತೀಚೆಗೆ ಆಲೋಚನೆಯೊಂದು ನನ್ನೆದೆಯಲ್ಲಿ ಸುಳಿದಾಡುತ್ತಿದೆ. ಬದುಕ ನೀಡುವ ಉಸಿರನ್ನೇ ಕೆಲ ಕಾಲ ಹಿಡಿದಿಟ್ಟುಕೊಳ್ಳಲಾಗದು. ದೇಹದ ಕಣಕಣವು ಕ್ಷಣಕೊಂದರಂತೆ ಹುಟ್ಟಿ ಸಾಯುತ್ತದೆ. ಅಂಥದ್ದರಲ್ಲಿ ಕೇವಲ ಒಂದಷ್ಟು ವರ್ಷದ ನಮ್ಮಿಬ್ಬರ ಸಂಬಂಧವ್ಯಾವ ಲೆಕ್ಕ?? ಸುಖಾ ಸುಮ್ಮನೆ ನೀನು ಹಾಗೆ... ನಾನು ಹೀಗೆ.... ಎಂಬ ವ್ಯರ್ಥಾಲಾಪಕ್ಕಿಂತ ಆಗಿರುವುದು, ಆಗುತ್ತಿರುವುದು ಮತ್ತು ಆಗಲಿರುವುದೆಲ್ಲವೂ ಒಳ್ಳೆಯದಕ್ಕೇ ಎನ್ನುವ ದಾರ್ಶನಿಕರಂತೆ ಬದುಕು ಕಟ್ಟಿಕೊಳ್ಳಬೇಕು. ಅದರಿಂದ ನಮ್ಮಿಬ್ಬರ ಆ ಘಟನಾವಳಿಗಳಿಗೆ ವೈಶಿಷ್ಟ್ಯತೆಗಳೊಂದಷ್ಟು ಹುಟ್ಟಿಕೊಳ್ಳುತ್ತದೆ. ಕೇವಲ ಉತ್ಕೃಷ ಪ್ರೀತಿ, ಗಾಢ ಸಂಬಂಧ, ತಂಗಾಳಿಯಂತೆ ಹರಿದಾಡುತ್ತಿದ್ದ ನಗು, ಆಗೊಮ್ಮೆ ಈಗೊಮ್ಮೆ ದುರುದ್ದೇಶವಿಲ್ಲದೆ ಎದ್ದೆದ್ದು ಬರುತ್ತಿದ್ದ ತಿಳಿಸಂಜೆಯಂಥ ಹುಸಿಕೋಪ, ಭವದ ಭಾರ ಕಳೆವಂತೆ ಹೆಗಲಿಗಾತುಕೊಂಡು ನೀಲ್ಗಡಲ ದಡದಲ್ಲಿ ಹಾಕಿದ ಹೆಜ್ಜೆಗ್ಯಾವ ಲೆಕ್ಕ.... ಕಳೆಯುವುದೆಲ್ಲವೂ ಕೂಡಿಡಲಿಕ್ಕೆನೋ ಎಂಬ ಭಾ...
ಪ್ರತಿ ವರ್ಷದಂತೆ ಮತ್ತೆ ವಸಂತ ಕಾಲ ಪ್ರಾರಂಭವಾಗಿದೆ. ಇದರ ಜೊತೆಯಲ್ಲೇ ಜೀವನವೂ ಮಗದೊಮ್ಮೆ ಮಗ್ಗುಲು ಹೊರಳಿಸಿದೆ. ಕಳೆದ ಕೆಲ ವರ್ಷಗಳಿಂದ ಬಾಳಿಗೊಂದು ಆಸರೆಯಾಗಿದ್ದ ಮಾಧ್ಯಮ ಜಗತ್ತಿಗೊಂದು ಪುಟ್ಟ ವಿರಾಮವನ್ನಿಟ್ಟಿದ್ದೇನೆ. ಇದರ ಜೊತೆಯಲ್ಲೇ ಒಂದಷ್ಟು ಹೊಸತನಗಳಿಗೂ ತೆರೆದುಕೊಳ್ಳುತ್ತಿದ್ದೇನೆ. ಬದುಕಿಗೆ, ಮನಸ್ಸಿಗೆ ಚೌಕಟ್ಟು ಹಾಕಿ ಬದುಕು ಅನ್ನೋ ಸಿದ್ಧ ಸೂತ್ರಕ್ಕೆ ತಿಲಾಂಜಲಿ ಇತ್ತು, ಈಗ ತಾನೇ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿರುವ ಮಗುವಿನ ಮನಸ್ಥಿತಿಯತ್ತ ಮುಂದಡಿ ಇಡುತ್ತಿದ್ದೇನೆ. ಹಲವು ವರ್ಷಗಳಿಂದಲೂ ಯುಗಾದಿ ಹಬ್ಬದ ವೇಳೆಯಲ್ಲೇ ನನ್ನ ಜೀವನದಲ್ಲೂ ಹಲವು ಮಹತ್ವದ ಘಟನೆಗಳು ನಡೆದಿವೆ. ಅವು ಎಂದೆಂದಿಗೂ ಮನದ ಮೂಲೆಯಲ್ಲಿ ಅಜರಾಮರವಾಗಿರುತ್ತವೆ. ಘಟನೆ-೧ ನನ್ನ ವೃತ್ತಿಯ ಆರಂಭಿಕ ದಿನಗಳವು. ೨೦೦೪ರ ಶಿರಸಿಯ ಜಾತ್ರೆಯ ಸಮಯ (ಏಪ್ರಿಲ್ ೪ ಅಂತ ನನ್ನ ನೆನಪು). ಕೆಲವೇ ತಿಂಗಳ ಹಿಂದೆ ಒಂದು ಕೆಲಸ ಬಿಟ್ಟು ಮತ್ತೊಂದು ಸೋಲಾರ್ ಕಂಪನಿಯಲ್ಲಿ ಕೆಲಸ ಪಡೆದಿದ್ದೆ. ಅಲ್ಲಿ ನಿಧಾನವಾಗಿ ಕೆಲಸ ಕಲಿಯಲಾರಂಭಿಸಿದ್ದೆ. ಅಲ್ಲಿದ್ದ ಎಲ್ಲರೂ ನನಗೆ ಸಂಸ್ಥೆಯ ಬಗ್ಗೆ, ಕೆಲಸ ಮಾಡುವ ವಿಧಾನ, ಕೆಲಸ ಮಾಡುವ ಸ್ಥಳದಲ್ಲಿ ನಡೆದುಕೊಳ್ಳುವ ರೀತಿ, ಹೀಗೆ ಸಾಕಷ್ಟನ್ನು ವಿವರವಾಗಿ ತಿಳಿಸಿಕೊಟ್ಟರು. ಜೊತೆಯಲ್ಲಿ ಒಂದಷ್ಟನ್ನು ನಾನೇ ಕಲಿತುಕೊಂಡೆ. ಅಂದು ನಾನು ಕಲಿತ, ...
ಹೃದಯ ತುಂಬಿದ ಧನ್ಯವಾದಗಳು.. ಯಾಕೆಂದರೆ ನನ್ನ आउकात ಏನು ಅಂತ ಹತ್ತಾರು ಬಾರಿ ಅರ್ಥೈಸಿ ಕೊಟ್ಟಿದ್ದಕ್ಕೆ. ಇದನ್ನು ನಿನ್ನ ತಪ್ಪು ಎಂದು ದೂರಲಾರೆ.. ನಾನೇನು ಎಂದು ನನಗೆ ತಿಳಿಸಿಕೊಡಲು ಅಂತಿಮವಾಗಿ ನಿನಗೆ ಸಿಕ್ಕ ಕೊನೆಯ ಮರ್ಗವೇ ಇದಾಗಿತ್ತ..! ಉತ್ತರ ಗೊತ್ತಿಲ್ಲದ ಪ್ರಶ್ನೆ. ತಿಳಿಯಬೇಕಾದ ಅನಿವಾರ್ಯಾತೆಯೂ ಸತ್ತು ಸುಡುಗಾಡಲ್ಲಿ ಮಲಗಿದೆ. ಆದರೂ ನೀನಿಷ್ಟೇ ಎಂದು ನಿನಗರ್ಥವಾಗಿದ್ದನ್ನು ಕೊಂಚ ಮೊದಲೇ ನನಗರ್ಥವಾಗುವಂತೆ ವಿವರಿಸಿದ್ದಿದ್ದರೆ...!!! ಕನಿಷ್ಟ ಪಕ್ಷ ಈ ಸಂಬಂಧ ಹೀಗೆ ಹಳ್ಳದ ಹಾದಿ ಹಿಡಿಯುತ್ತಿರಲಿಲ್ಲ ಎಂದಷ್ಟೇ ಹೇಳಬಲ್ಲೆ. ಅಥವಾ ನಿನಗಿಂತ ಮೊದಲು ನಾನೇ ಈ ಜಾಗದಿಂದ ಏನೂ ಹೇಳದೆ ತಂಗಾಳಿಯಂತೆ ಮರೆಯಾಗಿರುತ್ತಿದ್ದೆನಾ.. ಆದರೆ ಈಗ ಉಸಿರಾಡೋಣವೆಂದರೆ ಮಟ-ಮಟ ಮಧ್ಯಾಹ್ನದ ಸೂರ್ಯನ ನಿಟ್ಟುಸಿರು. ಅತ್ತ ಸಾಯಲೂ ಆಗದೆ, ಇತ್ತ ಬದುಕಲೂ ಆಗದೆ ಅಂತರ್ ಪಿಶಾಚಿಯಂತಾಗಿದ್ದೇನೆ. ಸುಮ್ಮನೇ ಕುಳಿತು ಬದುಕ ಅವಲೋಕಿಸಿದಾಗ ಮರಳುವ ಯೋಜನೆ ಪೂರ್ವ ನಿಯೋಜಿತ ಅಲ್ಲ ಅನ್ನೋದನ್ನು ನಿನ್ನ ಕೈಲಿ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಅಚ್ಚುಕಟ್ಟಾಗಿ ನಿಭಾಯಿಸಿದ್ದೀಯ. ಹತ್ತಾರು ಬಾರಿ ಸೂಕ್ಷ್ಮವಾಗಿ ತಿಳಿ ಹೇಳುವ ಸಾಹಸಕ್ಕೂ ಇಳಿದಿದ್ದೀ. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳದಿದ್ದಾಗ ಕೊನೆಯದಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಲ್ಲಿಂದ ಹೊರಟು ಹೋಗಿದ್ದೀ. ಎಲ್ಲವನ್ನೂ ಅದೆಷ್ಟು ಚಂದ ವ...
ಏನೆಂದು ಹೇಳಲಿ ? ನಾನೊಂದು ಬಗೆದರೆ ದೈವವೊಂದು ಬಗೆಯುತ್ತಂತೆ . ಹಾಗಾಗಿದೆ ನನ್ನ ಪರಿಸ್ತಿತಿ. ಕಾಲ ಚಕ್ರ ತಿರುಗುತ್ತಿರಬಹುದು. ಆದರೆ ಈ ತಿರುಗಾಟದಲ್ಲಿ ಮತ್ತೆ ಮತ್ತೆ ಅದೇ ಕ್ಷಣಕ್ಕೆ ಏಕೆ ಬಂದು ನಿಲ್ಲುತ್ತದೆ ಚಕ್ರದ ಮುಳ್ಳುಗಳು. ಚಲಿಸುವಾಗ ಮನಸ್ಸಿನ ತುಂಬೆಲ್ಲ ಗುರುತುಗಳನ್ನು ಮೂಡಿಸುತ್ತಾ ಇರುತ್ತದೆ. ತಿರುಗುವ ಚಕ್ರಕ್ಕೂ ಗೊತ್ತಿದೆ ಏನೋ ಈ ಗುರುತುಗಳು ಎಂದಿಗೂ ಅಳಿಸಲಾರವೆಂದು. ಎಂದೋ ಆಗಿಹೊದ ಘಟನೆಗಳನ್ನು ಮತ್ತೊಮ್ಮೆ ಮತ್ತೊಮ್ಮೆ ನೆನಪಿಸಲು ಬಂದು ನಿಲ್ಲುತ್ತವೆ... ಇದು ಸಮುದ್ರದ ದಂಡೆಯಲ್ಲಿನ ನಿನ್ನ ಸೌಮ್ಯವಾದ ಹೆಜ್ಜೆಗುರುತುಗಳಲ್ಲ. ಅಪರುಪಕ್ಕೆಂಬಂತೆ ಬರುವ ಹಳೆ ಮಳೆಗೆ ಚಿಗುರುವ ಗುಲಾಬಿ ಗಿಡ. ಬದುಕಿಸಿದಾತನನ್ನು ಮತ್ತೊಮ್ಮೆ ಹಂಬಲಿಸಿ ಮಾತನಾಡಿಸುವ ಕಾತುರ. ಅಲ್ಲಿ ಯಾವುದೇ ಕಾಮನೆಗಳಿಲ್ಲ. ಕೇವಲ ಮನಸ್ಸಿನಲ್ಲಾಗುತ್ತಿರುವ ಭಾವನೆಗಳ ಕಾಮನಬಿಲ್ಲನ್ನು ತೋರಿಸುವ ಹಂಬಲ. ಆದರೆ ಈ ಭೂಮಿಯಲ್ಲಿ ನಿನ್ನ ಪ್ರೀತಿಯ ಜೀವ ಜಲವನ್ನು ಎರೆಯುವುದೆಂದೋ...? ಅದಕ್ಕಾಗಿ ಕಾತರಿಸಿ ಕುಳಿತಿದೆ ನನ್ನ ಪುಟ್ಟ ಹೃದಯವೆಂಬ ಗುಲಾಬಿ ಗಿಡ. ಕಳೆದ ವರುಷ ಇದೇ ದಿನ ನನಗೆ ಕೊನೆಯ ಪರೀಕ್ಷೆ. ಅಂದೇ ನಿನ್ನ ಜನುಮ ದಿನ. ಅದಕ್ಕೊಂದು ಪುಟ್ಟ ಶುಭಾಶಯವನ್ನು ತಂಗಿಯ ಮೂಲಕ ತಿಳಿಸಿ (ನಿನ್ನ ಸೌಮ್ಯವಾದ ಮುಖದಲ್ಲಿದ್ದುದು ನಿಷ್ಕಲ್ಮಶ ನಗು ಮಾತ್ರವೆನೋ...? ನನ್ನೆಲ್ಲ ರೀತಿ ನೀತಿಗಳಿಗೆ.) ನಾನು ...
ಅಂತೂ ಇಂತೂ ಕೊನೆಯ ಮೊಳೆ ಹೊಡೆದಾಗಿದೆ. ಕೊನೆಯ ಪೆಟ್ಟು ಕೊಟ್ಟವರು ಯಾರು ಎನ್ನುವುದು ಅರ್ಥವಾಗದೇ ಉಳಿದಿದ್ದು ಮಾತ್ರ ಸಮಾಧಾನದ ಸಂಗತಿ. ಇದು ಬೇಕಂತಲೇ ಆಗಿದ್ದಾ, ಇಬ್ಬರೂ ಸೇರಿ ಕೈಯ್ಯಾರೆ ಕೊಲೆ ಮಾಡಿದ್ದಾ ವಿವರಣೆ ಅನಗತ್ಯ. ಆದರೂ ಮಾಧುರ್ಯಭರಿತ ಸಂಬಂಧವೊಂದಕ್ಕೆ ಎಳ್ಳು ನೀರು ಬಿಟ್ಟಿರುವುದು ನಿಚ್ಚಳ. ಹಳೆಯ ನೆನಪುಗಳನ್ನು ಕೆದಕಿ ಹೃದಯ ಹೊಲಸು ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಆದರೆ ಮೆದುಳು ಬಿಟ್ಟೂ ಬಿಡದೆ ಮತ್ತೆ ನಿನ್ನಲ್ಲಿಗೇ ತಂದು ನಿಲ್ಲಿಸುತ್ತದೆ. ಯಾಕೆ ಹೀಗಾಗುತ್ತಿದೆ ಗೊತ್ತಿಲ್ಲ. ನಿನ್ನದೇ ಮಡಿಲಲ್ಲಿ ಕನಸನ್ನು ಹೀಗೆ ಸುಮ್ಮನೆ ಬಿಚ್ಚಿಡುವ ದುರಭ್ಯಾಸ ನನ್ನದು. ಅದರರ್ಥ ನಿನಗೊಬ್ಬಳಿಗೆ ಆಗುವುದು! ಒಂದಾನೊಂದು ಕಾಲದಲ್ಲಿ.. ಹೀಗಂದರೆ ತಪ್ಪಾಗುತ್ತದೆ! ಕೆಲವೇ ದಿನದ ಹಿಂದಿನ ಮಾತು.. ಬೆಳಗ್ಗೆ ಎದ್ದ ಮರುಕ್ಷಣ ನನಗೆ ನಿನ್ನ ನೆನಪಾಗುತ್ತಿತ್ತು. ನಿನಗೆ ನಾನು...!! ಮೊಬೈಲ್ ನೋಡಿದರೆ ಕಾಣುತ್ತಿದ್ದುದು ನಿನ್ನದೇ ಸಂದೇಶ. ಅದಕ್ಕೆ ಉತ್ತರಿಸುವುದರ ಒಳಗೆ ನೀನೇ ಮಾತು ಆರಂಭಿಸುತ್ತಿದ್ದೇ. ಹೀಗೆ ಇಬ್ಬರದ್ದೂ ದಿನದಾರಂಭವಾಗುತ್ತಿತ್ತು. ಕೆಲಸಕ್ಕೆ ಹೋಗುವ ಒತ್ತಡವಿದ್ದರೂ ಕನಿಷ್ಠ ಅರ್ಧ ಗಂಟೆಯಾದರೂ ಹರಟುತ್ತಿದ್ದೆವು. ತಿಂಡಿ ತಿಂದು ಮನೆಯಿಂದ ಹೊರ ಬೀಳುವುದರೊಳಗೆ ಮತ್ತೆ ನಿನ್ನದೇ ಫೋನ್. ಅದಿಲ್ಲದ...
ಸಂದರ್ಶನ : ಶ್ರೀಪಾದ ಕವಲಕೋಡು. ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾಸಮಾರಾಧನಾ ಮಹೋತ್ಸವವು ಜ.೯ರಿಂದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಹೊಸದಿಗಂತ ಸಂದರ್ಶಿಸಿದಾಗ ತಮ್ಮ ಅಂತರಾಳ ಹಂಚಿಕೊಳ್ಳುವ ಮೂಲಕ ಭಕ್ತರಿಗೆ ಸಂದೇಶವನ್ನೂ ನೀಡಿದ್ದಾರೆ. * ಶಿಷ್ಯರಾಗಿ ಗುರುಗಳನ್ನು ಹೇಗೆ ಸ್ಮರಿಸುತ್ತೀರಿ? ಅವರು ಎಂದಿಗೂ ಒಂಟಿಯಾಗಿ ಇರುವವರಲ್ಲ. ಸಮಾಜದ ಎಲ್ಲರೊಂದಿಗೆ ಬೆರೆತಿರುವವರು. ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುವವರು. ಮತ್ತೊಬ್ಬರ ನೋವು ನಲಿವುಗಳಲ್ಲಿ ಸಹಭಾಗಿಯಾಗುವವರು. ಜೊತೆಯಲ್ಲಿ ತಮ್ಮ ಅಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಯನ್ನೂ ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇಂತಹ ಗುರುಗಳನ್ನು ಪಡೆದ ನಾವು, ಅವರ ಶಿಷ್ಯರಾಗಲು ಪುಣ್ಯ ಮಾಡಿದ್ದೆವು. ಶಾಸ್ತ್ರಾಧ್ಯಯನ ಹೊರತುಪಡಿಸಿ, ಉಳಿದೆಲ್ಲವನ್ನೂ ಗುರುಗಳ ಬದುಕನ್ನು ಗಮನಿಸಿಯೇ ಕಲಿತಿದ್ದು. ಹೀಗೇ ಇರಬೇಕು ಎನ್ನುವುದು ಎಲ್ಲರಿಗೂ ಪಾಠ. ಬದುಕಿದ ರೀತಿಯಿಂದಾಗಿ ಪಾಠ ಮಾಡಿದ್ದೇ ಹೊರತು, ಮಾತುಗಳ ಮೂಲಕ ಮಾಡಿದ್ದಿಲ್ಲ. ಬದುಕಿನ ಕ್ರಮವನ್ನು ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ. * ಗುರುಗಳೊಂದಿಗಿನ ಒಡನಾಟ ಹೇಗಿತ್ತು? ಆರಂಭದ ೪ ವರ್ಷ ಅಧ್ಯಯನಕ್ಕಾಗಿ ಅವರೊಂದಿಗೇ ಸದಾ ...