ಸ್ಮಾರ್ಟ್‍ಫೋನ್‍ನಲ್ಲಿ ಹರಿದಾಡುತ್ತೆ ಪೋರ್ನ್ ವೀಡಿಯೋ
ವಯಸ್ಕರು ನೋಡುತ್ತಾರೆ ಪ್ರತೀದಿನ ನೀಲಿ ಚಿತ್ರ..!!
ಶ್ಶ್ !!

  ನಾವೆಲ್ಲ ಜೀವನ ನಡೆಸುತ್ತಿರೋದು ತಂತ್ರಜ್ಞಾನ ಯುಗದಲ್ಲಿ. ಅದರಲ್ಲೂ ಈಗ ಎಲ್ಲರ ಕೈಲೂ ವಿಶ್ವದ ಕಟ್ಟಕಡೆಯ ಮಾಹಿತಿ ಓಡಾಡುತ್ತಿರುವ ಕ್ಷಣವಿದು. ಆದರೂ ದೈಹಿಕವಾಂಛೆಗಳ ವಿಚಾರದಲ್ಲಿ ವಯಸ್ಕರ ಮನಸ್ಥಿತಿ ಮಾತ್ರ ಇಂದಿಗೂ ಬದಲಾಗಿಲ್ಲ ಎನ್ನುತ್ತಿದೆ ಸಮೀಕ್ಷೆಯೊಂದು. ವಿಷಯ ಕೇಳಿ ಹೆದರಬೇಡಿ.. ಅದೇನಪ್ಪಾ ಅಂದ್ರೆ 18ವರ್ಷಕ್ಕಿಂತ ದೊಡ್ಡವರು ಹೆಚ್ಚು ಕಡಿಮೆ ದಿನಕ್ಕೊಂದರಂತೆ ಸೆಕ್ಸ್ ರಿಲೇಟೆಡ್ ಪೋರ್ನ್ ವೀಡಿಯೋಗಳನ್ನು ವೀಕ್ಷಿಸುತ್ತಾರಂತೆ..!! ಅದರಲ್ಲೂ ಎಲ್ಲಾ ನೋಡೋದು ತಮ್ಮ ಕೈಲಿ ಸ್ಮಾರ್ಟ್ ಆಗಿ ಕುಳಿತಿರೋ ಫೋನ್‍ನಲ್ಲಿ ಅಂತಿದೆ ಸಂಶೋಧನೆ. ಹೇಗಿದೆ ಜಮಾನ..! ಓದಿ. ವಯಸ್ಕರಾದರೆ  ಲಿಸ್ಟ್ ನೀವೂ ಇರಬಹುದು ಜೋಕೆ!! 

  ಇಂದಿಗೂ ನೀಲಿ ಚಿತ್ರಗಳು ಇಂಟರ್ನೆಟ್ ನಲ್ಲಿ ರಾಜ್ಯಭಾರ ಮಾಡುತ್ತವೆ. ಈ ಬಗ್ಗೆ ನಿಮಗ್ಯಾರಿಗೂ ಸಂದೇಹವೇ ಬೇಡ. ಯಾಕಂದರೆ ಈ ಕುರಿತಂತೆ ಸಂಶೋಧನೆ ನಡೆಸಿರುವ ಜ್ಯುನಿಪರ್ ರಿಸರ್ಚ್ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅದರಲ್ಲೂ ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರೂ ಅಂದರೆ ವಯಸ್ಕರು ಸರಾಸರಿ ದಿನಕ್ಕೊಂದರಂತೆ ಪೋರ್ನ್ ವೀಡಿಯೋಗಳನ್ನು ವೀಕ್ಷಿಸುತ್ತಾರಂತೆ. ಅಂದರೆ 2015ರಲ್ಲಿ ಈ ವರೆಗೂ ಸರಿಸುಮಾರು 136 ಬಿಲಿಯನ್ ಗೂ ಹೆಚ್ಚು ವಯಸ್ಕರ ಚಿತ್ರಗಳನ್ನು ನೋಡಿದ್ದಾರೆ ಅಲ್ಲದೆ ಈ ಪ್ರವೃತ್ತಿಯು ಮುಂದಿನ ಐದು ವರ್ಷಗಳಲ್ಲಿ ಸುಮಾರು 193 ಬಿಲಿಯನ್ ಗೆ ಏರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅಂದರೆ ಹೀಗೆ ನೀಲಿ ಚಿತ್ರಗಳನ್ನು ವೀಕ್ಷಿಸುವ ಪ್ರಮಾಣವು 2020ರ ಹೊತ್ತಿಗೆ ಶೇ. 55ರಷ್ಟು ಹೆಚ್ಚಾಗಲಿದೆ.

ಹೀಗೆ ಪೋರ್ನ್ ವೀಡಿಯೋಗಳನ್ನು ನೋಡುವವರ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣ ಎಂದರೆ ಜಗತ್ತಿನಾದ್ಯಂತ ಹೆಚ್ಚುತ್ತಿರುವ ತಂತ್ರಜ್ಞಾನದ ಪ್ರಭಾವ. ಅಮೆರಿಕಾದಂಥ ತಾಂತ್ರಿಕವಾಗಿ ಮುಂದುವರಿದ ದೇಶದಲ್ಲೂ ನೆಟ್ ಉಪಯೋಗ ವಿಪರೀತವಾಗಿರುವುದರಿಂದ ವಯಸ್ಕರು ಈ ದಿಕ್ಕಿನತ್ತ ಹೊರಳುತ್ತಿದ್ದಾರೆ ಎನ್ನಲಾಗಿದೆ. ಇದರ ಹೊರತಾಗಿಯೂ ಅಭಿವೃದ್ಧಿ ಹೊಂದಿರುವ ಪಶ್ಚಿಮ ಯುರೋಪಿಯನ್ ದೇಶಗಳಲ್ಲೂ ನೀಲಿ ಚಿತ್ರಗಳ ವೀಕ್ಷಣೆಯಲ್ಲಿ ಸಾಧಾರಣಕ್ಕಿಂತ ಅಧಿಕ ಬೆಳವಣಿಗೆಯಾಗಿರುವುದು ಕಂಡುಬಂದಿದೆ. ಇದರ ಜೊತೆಯಲ್ಲಿ ಮುಂದುವರಿಯುತ್ತಿರುವ ದೇಶಗಳ ಸಾಲಿನಲ್ಲಿರುವ ಭಾರತ, ಬ್ರೆಜಿಲ್ ಮೊದಲಾದವುಗಳಲ್ಲೂ ಪೋರ್ನ್ ವೀಡಿಯೋಗಳನ್ನು ನೋಡುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣ ಎಂದರೆ 4ಜಿ ಹಾಗೂ ವೈಫೈಗಳಂಥ ಸಾಧನಗಳ ಜೊತೆಯಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್‍ಗಳ ಬಳಕೆಯೂ ಅತ್ಯಧಿಕವಾಗಿರುವುದಾಗಿದೆ

ಐದು ವರ್ಷ ಚಿಂತೆ ಇಲ್ಲ!!
  ವಯಸ್ಕರ ಡಿಜಿಟಲ್ ವಿಷಯಗಳು: ಮಾರುಕಟ್ಟೆಯ ಪ್ರವೃತ್ತಿ, ಮುನ್ಸೂಚನೆ ಹಾಗೂ ಆದಾಯದ ಅವಕಾಶಗಳು 2015-2020’ ರ ವರದಿಯಲ್ಲಿ, ಆದಾಯದ ಬೆಳವಣಿಗೆಯ ಕುರಿತಂತೆ ತಯಾರಿಸಲಾದ ವರದಿಯಲ್ಲಿ ಹೇಳಲಾದಂತೆ ಮುಂದಿನ ಐದು ವರ್ಷಗಳಲ್ಲಿ ಪೋರ್ನ್ ವೀಡಿಯೋ ವೀಕ್ಷಣೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವಂತೆ. ಆದರೆ ಇದರಿಂದ ಪ್ರಮುಖವಾಗಿ ಉಪಯೋಗವಾಗುವುದು ವೆಬ್ ಕ್ಯಾಮ್ ಹಾಗೂ ವೀಡಿಯೋ ಚಾಟಿಂಗ್ ವಿಭಾಗಗಳಿಗೆ. ಇದರಿಂದಾಗಿ ಉಳಿದೆಲ್ಲವಕ್ಕೂ ಉಪಯೋಗವಾಗಲಿದೆಯಂತೆ. ಮತ್ತು ಇದರ ಜೊತೆಯಲ್ಲಿ ತಿಂಗಳಿಗೆ ಇಷ್ಟು ಅಂತ ಹಣ ಪಾವತಿಸಿಯೂ ಅಥವಾ ಪ್ರತಿಯೊಂದು ಚಿತ್ರಕ್ಕಿಷ್ಟು ಎಂದು ದುಡ್ಡು ಕೊಟ್ಟಾದರೂ ಪೋರ್ನ್ ವೀಡಿಯೋಗಳನ್ನು ನೋಡುವ ಸಾಧ್ಯತೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

  ಅಭಿವೃದ್ಧಿ ಹೊಂದಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ಈ ಪೋರ್ನ್ ವೀಡಿಯೋ ಮಾರುಕಟ್ಟೆಯ ಬೆಳವಣಿಗೆಗೆ ಮಾರಕವಾದ ಅಂಶವೆಂದರೆ ಎಲ್ಲಾ ಸರಕುಗಳ ಉಚಿತ ಲಭ್ಯತೆ. ಹೀಗಾಗಿ ಜನ ಅವುಗಳನ್ನು ದುಡ್ಡುಕೊಟ್ಟು ಖರೀದಿಸಲು ಅಥವಾ ಚಂದಾದಾರರಾಗಿಯೋ ನೀಲಿ ಚಿತ್ರಗಳನ್ನು ವೀಕ್ಷಿಸಲು ಮುಂದಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದರ ಜೊತೆಯಲ್ಲಿ ವಯಸ್ಕರ ಎಸ್ಎಂಲಎಸ್ ಮಾರುಕಟ್ಟೆಯ ಆದಾಯದಲ್ಲೂ ತೀವ್ರವಾದ ಕುಸಿತ ಕಾಣುತ್ತಿದ್ದು, ಭಾರತದ ಮಾರುಕಟ್ಟೆಯಲ್ಲೂ ಇದರ ಪ್ರಭಾವವು ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ವಾಸ್ತವ ವಿಷಯ, ಭಯಾನಕ ವಿಚಾರ ಎಂದರೆ ಮುಂದಿನ ಐದು ವರ್ಷಗಳಲ್ಲಿ ಪೋರ್ನ್ ವೀಡಿಯೋ ನೋಡುಗರ ಸಂಖ್ಯೆಯು ಹೆಚ್ಚಲಿದೆ ಎನ್ನುವುದಾಗಿದೆ. 
  ‘ಕಾಮಾತುರಾಣಾಂ ನ ಭಯಂ, ನ ಲಜ್ಜಾ’.. ಎಂಬಂತೆ ಜಗತ್ತು ಎಷ್ಟೇ ಮುಂದುವರಿದರೂ ಬಿಸಿ ರಕ್ತದ ಮಾನವ ತನ್ನ ವಿಲಕ್ಷಣ ಪ್ರವೃತ್ತಿಯನ್ನು ಕಡಿಮೆ ಮಾಡಿಕೊಳ್ಳುವ ಯಾವುದೇ ಸೂಚನೆಗಳೂ ಕಾಣದಿರುವುದು ಮಾತ್ರ ವಿಪರ್ಯಾಸವೇ ಸರಿ.! 

========================================================================
#expedition, #Travel #Photo #features, #stories, #reviews, #Porn, #video, #life, #Good
Tags: #Features#reviews#stories

Post a Comment

0 Comments

Skip to main content